ನಾಗಮಂಗಲ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸಂಸ್ಥೆಯ ಪ್ರಥಮ ಆಡಳಿತ ಅಧಿಕಾರಿಣಿ ಮಾತೇಶ್ವರಿ ಜಗದಂಬ ಸರಸ್ವತೀಜೀ ಅವರ 60ನೇ ಪುಣ್ಯಸ್ಮೃತಿ ದಿನವನ್ನು ಆಧ್ಯಾತ್ಮಿಕ ದಿನವನ್ನಾಗಿ ಆಚರಿಸಲಾಯಿತು.
ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದ ಚಾಮರಾಜನಗರ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಬ್ರಹ್ಮಾಕುಮಾರಿ ದಾನೇಶ್ವರೀ ಅವರು ‘ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರು ಮಹತ್ತರವಾದ ಸ್ಥಾನವನ್ನು ಪಡೆದಿದ್ದಾರೆ. ಅವರಲ್ಲಿ ಮಾತೇಶ್ವರೀ ಜಗದಂಬ ಸರಸ್ವತೀ ಜೀ ಅವರು ಅಗ್ರಗಣ್ಯರು’ ಎಂದರು.
ಬ್ರಹ್ಮಾಕುಮಾರಿ ಶೈಲಾಜಿ, ಸರಸ್ವತಿಜೀ ಅವರ ಸಾಧನೆಗಳ ಕುರಿತು ಮಾಹಿತಿ ನೀಡಿದರು.
ಬಿ.ಕೆ.ಆರಾಧ್ಯ, ಕೃಷ್ಣಮೂರ್ತಿ, ದೀಪು, ಲಲಿತಕ್ಕ, ಕೆಂಪಮ್ಮ,ಪಾರ್ವತಿ ಅಕ್ಕ, ನಾಗರಾಜ್, ಶಿವಕಮಲ, ವಿಜಯಕುಮಾರ್, ಶ್ರೀನಿವಾಸ್, ಸುಶೀಲಕ್ಕ, ಜಯಲಕ್ಷ್ಮೀ ಅಕ್ಕ, ಪೂರ್ಣಿಮಕ್ಕ, ರೇವಣ್ಣ, ಸಿದ್ದೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.