ADVERTISEMENT

ಶಾಸಕರ ವಿರುದ್ಧ ಹೇಳಿಕೆ ಸರಿಯಲ್ಲ : ಸುರೇಶ್ ಕಂಠಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 14:19 IST
Last Updated 18 ಜೂನ್ 2025, 14:19 IST
ಸುರೇಶ್ ಕಂಠಿ 
ಸುರೇಶ್ ಕಂಠಿ    

ಮದ್ದೂರು: ಶಾಸಕ ಕೆ.ಎಂ. ಉದಯ್ ಅವರ ಬಗ್ಗೆ ದಲಿತ ಮುಖಂಡರೆನಿಸಿಕೊಂಡಿರುವ ಒಬ್ಬ ವ್ಯಕ್ತಿ ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ವೇದಿಕೆಯ ಸದಸ್ಯರು ಹಾಗೂ ಮುಖಂಡರೊಂದಿಗೆ ನಡೆದ ಸಭೆಯ ಬಳಿಕ ಅವರು ಮಾತನಾಡಿದರು.

‘ಸೋಮನಹಳ್ಳಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ನೇತೃತ್ವ ವಹಿಸಿದ್ದ ವ್ಯಕ್ತಿಯೊಬ್ಬರು ಶಾಸಕರ ಬಗ್ಗೆ ಆಧಾರರಹಿತವಾಗಿ ಅವರ ತೇಜೋವಧೆ ಮಾಡಲು ಹೊರಟಿರುವುದು ತರವಲ್ಲ. ಈ ಕೂಡಲೇ ಅವರು ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಶಾಸಕರ ವಿರುದ್ಧ ಆರೋಪಿಸಿರುವ ದಲಿತ ಮುಖಂಡ ಈ ಹಿಂದೆ ಜಾತಿ ನಿಂದನೆ, ಬೆದರಿಸಿ ಹಣ ಮಾಡಿದವರು ಹಾಗೂ ದಲಿತರ ನಿವೇಶನಗಳನ್ನು ಕಬಳಿಸಿರುವ ಬಗ್ಗೆ ಗೊತ್ತಿದೆ. ಪದೇ ಪದೇ ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ಆ ವ್ಯಕ್ತಿಯ ಇತಿಹಾಸವನ್ನು ತೆಗೆಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ದಲಿತ ಮುಖಂಡರಾದ ಚಿದಂಬರಮೂರ್ತಿ, ಅಮೀನ್ ಶಿವಲಿಂಗಯ್ಯ, ತಿಮ್ಮಯ್ಯ, ಅರುವನಹಳ್ಳಿ ಸಿದ್ದರಾಜು, ಬಸವರಾಜು, ಮರಿದೇವರು, ಆಲೂರು ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.