ಮದ್ದೂರು: ತಾಲೂಕಿನ ಕೊಪ್ಪ ಹೋಬಳಿಯ ಡಿ.ಮಲ್ಲಿಗೆರೆ ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿ ಮಲತಾಯಿಯೊಬ್ಬರು ಭಾನುವಾರ ಮಲಮಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ಹರಿದಾಡಿತ್ತು.
‘ಮಲತಾಯಿ ಭಾಗ್ಯ ಹಲ್ಲೆ ನಡೆಸಿದ್ದಾರೆ’ ಎಂದು ಪುಟ್ಟಸ್ವಾಮಿ ಎಂಬುವವರ ಪುತ್ರಿ ರೋಜಾ ಎಂಬುವವರು ಕೊಪ್ಪ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.
ಪತ್ನಿ ನಿಧನರಾದ ಬಳಿಕ ಪುಟ್ಟಸ್ವಾಮಿ ಭಾಗ್ಯ ಅವರನ್ನು ಮದುವೆಯಾಗಿದ್ದರು. ನಂತರ ಅವರೂ ಮೃತಪಟ್ಟರು. ಅವರ ಇಬ್ಬರು ಪುತ್ರಿಯರು ಹಾಗೂ ಭಾಗ್ಯ ಅವರ ನಡುವೆ ಆಸ್ತಿ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಜಮೀನಿನ ಬಳಿ ಭಾಗ್ಯ ಅವರು ನಾಟಿ ಮಾಡುವಾಗ ರೋಜಾ ಬಂದ ವೇಳೆ ಜಗಳವಾಗಿತ್ತು. ಆ ದೃಶ್ಯಗಳನ್ನು ಸ್ಥಳೀಯರು ವಿಡಿಯೋ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.