
ಮದ್ದೂರು: ರಾಜ್ಯದಲ್ಲಿ ರೈತ ಸಂಘಟನೆಯನ್ನು ಬಲಿಷ್ಠಗೊಳಿಸಿ ಹಿರಿಯರ ತ್ಯಾಗವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಂತಹ ಕೆಲಸವನ್ನು ಪ್ರತಿಯೊಬ್ಬ ಕಾರ್ಯಕರ್ತರು ಮಾಡುವ ಪಣತೊಡಬೇಕು ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲ್ಲೂಕಿನ ಗೆಜ್ಜಲಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ರೈತ ಸಂಘಟನೆ ಆಯೋಜಿಸಿದ್ದ ಹುತಾತ್ಮ ರೈತರ 43 ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತ ಹೋರಾಟಗಳು ಕಡಿಮೆ ಆಗುತ್ತಿರುವುದು ಆತಂಕಕಾರಿ ವಿಚಾರ ಎಂದರು.
ರೈತ ಹುತಾತ್ಮರಾದ ಸ್ಥಳದಲ್ಲಿ ಸಂಘಟನೆಯ ರೈತ ನಾಯಕರ ಗ್ಯಾಲರಿ, ಗ್ರಂಥಾಲಯ, ಈ ಭಾಗದ ಕಾರ್ಯಚಟುವಟಿಕೆ ತರಬೇತಿ ಮತ್ತು ಮತ್ತಿತರ ಸೌಲಭ್ಯವನ್ನು ಕಲ್ಪಿಸಲು ಸಂಘಟನೆ ಮುಂದಾಗಬೇಕೆಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ರೈತ ಹುತಾತ್ಮರಾದ ಸಿದ್ದಪ್ಪ ಹಾಗೂ ನಾಥೇಗೌಡ ರವರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸಾಲುಮರದ ತಿಮ್ಮಕ್ಕನವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರೈತ ಮುಖಂಡರಾದ ಬೋರಾಪುರ ಶಂಕರೇಗೌಡ, ಮಲ್ಲಯ್ಯ, ರಾಜುಗೌಡ, ಗೋವಿಂದು, ಕೆಂಪು ಗೌಡ ,ತಿಮ್ಮೇಗೌಡ, ಮಹಾದೇವ, ಜಯರಾಮ, ನಾಗರಾಜು, ಲತಾ ಶಂಕರ್, ಮಮತಾ, ರತ್ನಮ್ಮ, ಉಮೇಶ್, ಲಿಂಗಪ್ಪಾಜಿ, ಶಂಕರ್ ದೇವರಾಜು, ರವಿಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.