ADVERTISEMENT

ಟಿಎಪಿಸಿಎಂಎಸ್ ಚುನಾವಣೆ: ಜೆಡಿಎಸ್ ಜಯಭೇರಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 4:37 IST
Last Updated 3 ಅಕ್ಟೋಬರ್ 2025, 4:37 IST
ಪಾಂಡವಪುರ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ 9 ಮಂದಿ ಜೆಡಿಎಸ್ ಅಭ್ಯರ್ಥಿಗಳನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಚಿನಕುರಳಿ ಗ್ರಾಮದಲ್ಲಿ ಅಭಿನಂದಿಸಿದರು 
ಪಾಂಡವಪುರ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ 9 ಮಂದಿ ಜೆಡಿಎಸ್ ಅಭ್ಯರ್ಥಿಗಳನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಚಿನಕುರಳಿ ಗ್ರಾಮದಲ್ಲಿ ಅಭಿನಂದಿಸಿದರು    

ಪಾಂಡವಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 12 ಅಭ್ಯರ್ಥಿಗಳ ಪೈಕಿ 9 ಮಂದಿ ಗೆಲುವು ಸಾಧಿಸಿದ್ದಾರೆ. ರೈತ ಸಂಘ–ಕಾಂಗ್ರೆಸ್ ಮೈತ್ರಿ ಬೆಂಬಲಿತ 12 ಅಭ್ಯರ್ಥಿಗಳ ಪೈಕಿ 3 ಮಂದಿ ಮಾತ್ರ ಆಯ್ಕೆಯಾಗಿದ್ದಾರೆ. 7 ಮಂದಿ ಬಿಜೆಪಿ ಬೆಂಬಿತ ಅಭ್ಯರ್ಥಿಗಳು ಸೋಲನ್ನು ಅನುಭವಿಸಿದ್ದಾರೆ.

ಸಾಮಾನ್ಯ ಕ್ಷೇತ್ರ: ಪಿ.ಎಲ್.ಆದರ್ಶ–2175 (ಜೆಡಿಎಸ್), ಎಚ್.ಎನ್.ಚಿಟ್ಟಿಬಾಬು–1919 (ರೈತ ಸಂಘ–ಕಾಂಗ್ರೆಸ್ ಮೈತ್ರಿ), ಹಿಂದುಳಿದ ಬಿ.ವರ್ಗ: ಗಿರೀಶ್–20613 (ಜೆಡಿಎಸ್), ಹಿಂದುಳಿದ ವರ್ಗ ಎ: ಎ.ಕೃಷ್ಣ–1762( ಜೆಡಿಎಸ್), ಸಾಮಾನ್ಯ ಮಹಿಳೆ: ಪ್ರೇಮ–1746 (ಜೆಡಿಎಸ್), ಸುನಂದಮ್ಮ–1431 (ರೈತ ಸಂಘ–ಕಾಂಗ್ರೆಸ್ ಮೈತ್ರಿ), ಪರಿಶಿಷ್ಠ ಜಾತಿ: ಟಿ.ಎಸ್.ಹಾಳಯ್ಯ–1500 (ರೈತ ಸಂಘ–ಕಾಂಗ್ರೆಸ್ ಮೈತ್ರಿ), ಪರಿಶಿಷ್ಟ ಪಂಗಡ: ನರಸಿಂಹನಾಯ್ಕ–1363 (ಜೆಡಿಎಸ್) ಮತ ಪಡೆದು ಗೆಲುವು ಸಾಧಿಸಿದ್ದಾರೆ.

ಎ ತರಗತಿಯ 4 ಕ್ಷೇತ್ರದಲ್ಲೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಪಡೆದಿದ್ದಾರೆ. ಸಿ.ಎಂ.ಕಿರಣ್‌ ಕುಮಾರ್–18, ಸಿ.ಎಸ್.ಗೋಪಾಲಗೌಡ–17, ವಿ.ಎಸ್.ನಿಂಗೇಗೌಡ–17, ಎಂ.ಸ್ವಾಮಿ–17 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
 
ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ ಚುನಾವಣಾಧಿಕಾರಿಯಾಗಿ ಹಾಗೂ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ADVERTISEMENT

ಟಿಎಪಿಸಿಎಂಎಸ್ ಚುನಾಣೆಯಲ್ಲಿ ಆಯ್ಕೆಯಾಗಿದ್ದ 9 ಮಂದಿ ಜೆಡಿಎಸ್ ಅಭ್ಯರ್ಥಿಗಳನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.