ಪಾಂಡವಪುರ: ಒಂದು ವಾರದಿಂದ ಸುರಿದ ಮಳೆಯಿಂದಾಗಿ ತಾಲ್ಲೂಕಿನ ಚಿಕ್ಕಮರಳಿ ಗ್ರಾಮದ ಹೊರವಲಯದಲ್ಲಿ ಚನ್ನಿಗರಾಯಸ್ವಾಮಿ ದೇವಸ್ಥಾನದ ಗೋಪುರದ ಮೇಲೆ ಮರ ಬಿದ್ದು ವಿಗ್ರಹಗಳು ಬಿರುಕು ಬಿಟ್ಟಿವೆ.
ಸತತವಾಗಿ ಸುರಿದ ಮಳೆಗೆ ದೇವಸ್ಥಾನದ ಹಿಂಭಾಗದಲ್ಲಿದ್ದ ಮರದ ಬುಡ ಕೊಳೆತು ಗಾಳಿಗೆ ಗುರುವಾರ ಬೆಳಿಗ್ಗೆ ದೇವಸ್ಥಾನದ ಗೋಪುರದ ಮೇಲೆ ಉರುಳಿ ಬಿದ್ದಿದೆ. ಮರಬಿದ್ದ ರಭಸಕ್ಕೆ ಗೋಪುರ ಮೇಲಿದ್ದ ಕಳಸ, ವಿಗ್ರಹಗಳು ಛಿದ್ರವಾಗಿವೆ. ಗೋಪುರ ಬಿರುಕುಬಿಟ್ಟಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಚನ್ನಿಗರಾಯಸ್ವಾಮಿ ದೇವಸ್ಥಾನದ ಪುರಾತನ ಕಾಲದ ದೇವಾಲಯವಾಗಿದ್ದು, ಈಚೆಗೆ ಕೆಲವು ವರ್ಷಗಳ ಹಿಂದೆಯಷ್ಟೇ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.