
ಭಾರತೀನಗರ: ‘ಸಮಾಜ ಸೇವಕರ ಹೆಸರು ಯಾವಾಗಲೂ ಚಿರಸ್ಥಾಯಿಯಾಗಿರುತ್ತದೆ. ಆದ್ದರಿಂದ ಯಾರಾದರೂ ಸರಿ ಸಮಾಜದ ಏಳಿಗೆಗಾಗಿ ದುಡಿಯಬೇಕು’ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ಸಮೀಪದ ದೊಡ್ಡಅರಸಿನಕೆರೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಯಜಮಾನ್ ಚಿಕ್ಕಣ್ಣನವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಯ.ಚಿಕ್ಕಣ್ಣ ಅವರು ಹಿಂದಿನಿಂದಲೂ ಗ್ರಾಮದವರ ಜೊತೆ ಒಡನಾಡಿಯಾಗಿದ್ದರು. ಅವರು ನಮ್ಮೊಂದಿಗಿಲ್ಲದಿರಬಹುದು. ಆದರೆ ಅವರ ಸಾಮಾಜಿಕ ಕಾರ್ಯಕ್ರಮಗಳು ನಮ್ಮ ಕಣ್ಣು ಮುಂದಿವೆ. ಅದನ್ನೇ ಅವರ ಮಗ ಮಹೇಂದ್ರ ಡಿ.ಸಿ. ಅವರು ಮುಂದುವರೆಸಿಕೊಂಡು ಹೋಗಲಿ’ ಎಂದರು.
ರಾಮನಗರದ ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರ ಸ್ವಾಮೀಜಿ ತೆಂಗಿನ ಸಸಿಗಳನ್ನು ವಿತರಿಸಿ ಮಾತನಾಡಿ,ಕಲ್ಪವೃಕ್ಷದಂತೆ ಎಲ್ಲರೂ ಜೀವನ ನಡೆಸಬೇಕು ಎಂದರು.
ಬುದ್ಧ ವಿಹಾರದ ಸುಗತಾಪಲ್ ಬಂತೇಜಿ ಅವರು ಬುದ್ಧರ ಪಂಚಶೀಲ ತತ್ವಗಳನ್ನು ಬೋಧಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ, ಪುರಸಭಾ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜು ಮಾತನಾಡಿದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಸಿ.ಮಹೇಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೈ.ಎಲ್.ಶಿವರಾಂ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸತೀಶ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಕಾಳಿಕಾಂಬ ವಿದ್ಯಾಸಂಸ್ಥೆಯ ನಾರಾಯಣ್, ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಟಿ.ಶಿವಕುಮಾರ್ ಮುಖಂಡರಾದ ನಿತ್ಯಾನಂದ, ಪ್ರೊ.ಪ್ರಕಾಶ್, ಕಾಳಯ್ಯ ಹುಚ್ಚೇಗೌಡ, ಚಿಕ್ಕುಚ್ಚೇಗೌಡ, ಲಕ್ಷಮ್ಮ, ಡಿ.ಸಿ.ಉಮೇಶ್, ಎಂ.ಸಿ.ಶಿವರಾಜ್, ಚಿಕ್ಕಣ್ಣ ಸುರೇಂದ್ರ, ವಿಶಾಲ್ ಗುಡಿಗೆರೆ ಬಸವರಾಜು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.