ಬೆಳಕವಾಡಿ: ಸಮೀಪದ ಕಗ್ಗಲೀಪುರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆಯಾಗಿ ಬಸಮಣಿ ಹಾಗೂ ಉಪಾಧ್ಯಕ್ಷೆಯಾಗಿ ಶಿವಮ್ಮ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಬಸಮಣಿ, ಶಿವಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಬಿ.ಪಿ.ಸುಧಾ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಒಬ್ಬ ನಿರ್ದೇಶಕಿ ಗೈರಾಗಿದ್ದರು.
ಸಂಘದ ನಿರ್ದೇಶಕರಾದ ಭಾಗ್ಯಮ್ಮ, ಪ್ರೇಮ, ಸುಗುಣ, ಮಾದಲಾಂಬಿಕ, ಸುಮ, ವೇದಾವತಿ, ಕೆ.ಎನ್. ಶಿಲ್ಪ, ಪ್ರಭಾರ ಕಾರ್ಯದರ್ಶಿ ಯುಕ್ತಶ್ರೀ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.