ADVERTISEMENT

ಮತದಾನದ ಹಕ್ಕು ಮಹತ್ವವಾದುದು: ಆಸೀಫ್‌

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 12:27 IST
Last Updated 18 ಏಪ್ರಿಲ್ 2024, 12:27 IST
ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿ ಬಳಿಯ ಎಂಆರ್‌ಐಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ಗುರುವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ಶೇಖ್ ತನ್ವೀರ್‌ ಆಸೀಫ್‌ ಮಾತನಾಡಿದರು. ತಾ.ಪಂ. ಇಒ ವೇಣು, ಬಿಇಒ ಮಹೇಶ್‌ ಆರ್‌.ಪಿ ಭಾಗವಹಿಸಿದ್ದರು
ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿ ಬಳಿಯ ಎಂಆರ್‌ಐಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ಗುರುವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ಶೇಖ್ ತನ್ವೀರ್‌ ಆಸೀಫ್‌ ಮಾತನಾಡಿದರು. ತಾ.ಪಂ. ಇಒ ವೇಣು, ಬಿಇಒ ಮಹೇಶ್‌ ಆರ್‌.ಪಿ ಭಾಗವಹಿಸಿದ್ದರು   

ಶ್ರೀರಂಗಪಟ್ಟಣ: ‘ಜನತಂತ್ರ ವ್ಯವಸ್ಥೆಯಲ್ಲಿ ಮತದಾನದ ಹಕ್ಕಿಗೆ ಮಹತ್ವ ಇದ್ದು, ಮತದಾನ ಮಾಡುವ ಅರ್ಹತೆ ಹೊಂದಿರುವ ಎಲ್ಲರೂ ಈ ವಿಶೇಷ ಹಕ್ಕನ್ನು ಕಳೆದುಕೊಳ್ಳಬಾರದು’ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್‌ ಆಸೀಫ್‌ ಹೇಳಿದರು.

ತಾಲ್ಲೂಕಿನ ನಗುವನಹಳ್ಳಿ ಬಳಿ ಇರುವ ಎಂಆರ್‌ಐಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ಗುರುವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮತದಾನ ಎಂಬ ಅಸ್ತ್ರ ಬಳಸಲು ಚುನಾವಣೆ ಸೂಕ್ತ ಸಮಯವಾಗಿದ್ದು, ಎಲ್ಲರೂ ತಮ್ಮ ಹಕ್ಕು ಚಲಾಯಿಸುವ ಮೂಲಕ ತಮಗೆ ಸರಿ ಎನಿಸಿದ ವ್ಯಕ್ತಿಯನ್ನು ಆಯ್ಕೆ ಮಾಡಬಹುದು. ಆದರೆ, ಸಾಕಷ್ಟು ಮಂದಿ ತಮಗಿರುವ ಈ ಹಕ್ಕನ್ನು ಚಲಾಯಿಸುತ್ತಿಲ್ಲ. ಮುಖ್ಯವಾಗಿ ನಗರ ಪ್ರದೇಶಗಳ ಮತದಾರರು ನಿರಾಸಕ್ತಿ ತೋರುತ್ತಿದ್ದಾರೆ’ ಎಂದು ಅವರು ವಿಷಾದಿಸಿದರು.

ADVERTISEMENT

ಮಂಡ್ಯ ಜಿಲ್ಲಾ ಸ್ವೀಪ್‌ ಸಮಿತಿಯ ನೋಡಲ್‌ ಅಧಿಕಾರಿ ಸಂಜೀವಪ್ಪ ಮಾತನಾಡಿ, ‘ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಶೇ 90ರಷ್ಟು ಮತದಾನ ನಡೆಯುವಂತೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಂಗೋಲಿ ಸ್ಪರ್ಧೆ ಇತರ ವಿಭಿನ್ನ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹೊಸ ಮತದಾರರು ಮತ ಹಾಕುವ ಮೂಲಕ ಹೊಸ ಪುಳಕ ಅನುಭವಿಸಬೇಕು’ ಎಂದು ತಿಳಿಸಿದರು.

ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲ್ಲೂಕಿನ ಸ್ವೀಪ್‌ ನೋಡಲ್‌ ಅಧಿಕಾರಿ ಎ.ಬಿ. ವೇಣು, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್‌ ಆರ್‌.ಪಿ ಮಾತನಾಡಿದರು.

ನರೇಗಾ ಯೋಜನೆಯ ಮಾಹಿತಿ ಶಿಕ್ಷಣ ಸಂವಹನ ಸಂಯೋಜಕಿ ಪಿ. ಸುಮಾ, ಎನ್‌ಆರ್‌ಎಂಎಲ್‌ ಯೋಜನೆಯ ತಾಲ್ಲೂಕು ಸಂಯೋಜಕ ಜೆ. ನಂಜುಂಡಯ್ಯ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ಆರ್‌. ಶಿಲ್ಪಾ, ನಾಗೇಂದ್ರ, ಪ್ರಶಾಂತ್‌ಬಾಬು ಟಿ.ಎ ಹಾಗೂ ಕಾಲೇಜಿನ ಸಿಬ್ಬಂದಿ ಭಾಗವಹಿಸಿದ್ದರು.

ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ‘ಮತದಾನ ಮಾಡಿ’ ಎಂಬ ಸಾಲು ನಿರ್ಮಿಸಿ ಗಮನ ಸೆಳೆದರು.

ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿ ಬಳಿಯ ಎಂಆರ್‌ಐಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ಗುರುವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ‘ಮತದಾನ ಮಾಡಿ’ ಎಂಬ ಸಾಲು ನಿರ್ಮಿಸಿ ಗಮನ ಸೆಳೆದರು

‘ಜನತಂತ್ರ ವ್ಯವಸ್ಥೆಯಲ್ಲಿ ಮತದಾನದ ಹಕ್ಕಿಗೆ ಮಹತ್ವ ಇದ್ದು ಮತದಾನ ಮಾಡುವ ಅರ್ಹತೆ ಹೊಂದಿರುವ ಎಲ್ಲರೂ ಈ ವಿಶೇಷ ಹಕ್ಕನ್ನು ಕಳೆದುಕೊಳ್ಳಬಾರದು’ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್‌ ಆಸೀಫ್‌ ಹೇಳಿದರು. ತಾಲ್ಲೂಕಿನ ನಗುವನಹಳ್ಳಿ ಬಳಿ ಇರುವ ಎಂಆರ್‌ಐಟಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ಗುರುವಾರ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 18 ವರ್ಷ ಮೇಲ್ಪಟ್ಟ ಎಲ್ಲ ಅರ್ಹರಿಗೂ ಮತದಾನದ ಹಕ್ಕು ಸಿಗುತ್ತದೆ. ಲೋಕಸಭೆ ವಿಧಾನಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮತ ಚಲಾಯಿಸಬಹುದು. ತಮಗೆ ಸರಿ ಎನಿಸಿದ ವ್ಯಕ್ತಿಯನ್ನು ಆಯ್ಕೆ ಮಾಡಿ ಲೋಕಸಭೆ ವಿಧಾನಸಭೆಗಳಿಗೆ ಕಳುಹಿಸಬಹುದು. ಆ ಮೂಲಕ ತಮಗೆ ಬೇಕಾದ ಕಾನೂನು ರೂಪಿಸಿಕೊಳ್ಳಲು ಮತದಾನ ಎಂಬ ಅಸ್ತ್ರ ಬಳಸಲು ಚುನಾವಣೆ ಸೂಕ್ತ ಸಮಯ. ಆದರೆ ಸಾಕಷ್ಟು ಮಂದಿ ತಮಗಿರುವ ಈ ಹಕ್ಕನ್ನು ಚಲಾಯಿಸುತ್ತಿಲ್ಲ. ಮುಖ್ಯವಾಗಿ ನಗರ ಪ್ರದೇಶಗಳ ಮತದಾರರು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಅವರು ವಿಷಾದಿಸಿದರು. ಮಂಡ್ಯ ಜಿಲ್ಲಾ ಸ್ವೀಪ್‌ ಸಮಿತಿಯ ನೋಡಲ್‌ ಅಧಿಕಾರಿ ಸಂಜೀವಪ್ಪ ಮಾತನಾಡಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಶೇ 90ರಷ್ಟು ಮತದಾನ ನಡೆಯುವಂತೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಂಗೋಲಿ ಸ್ಪರ್ಧೆ ಇತರ ವಿಭಿನ್ನ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಏ. 26ರಂದು ನಡೆಯುವ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿರುವ ಎಲ್ಲರೂ ಮತಗಟ್ಟೆ ಬಂದು ಮತ ಚಲಾಯಿಸಬೇಕು. ಹೊಸ ಮತದಾರರು ಮತ ಹಾಕುವ ಮೂಲಕ ಹೊಸ ಪುಳಕ ಅನುಭವಿಸಬೇಕು ಎಂದು ತಿಳಿಸಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲ್ಲೂಕಿನ ಸ್ವೀಪ್‌ ನೋಡಲ್‌ ಅಧಿಕಾರಿ ಎ.ಬಿ. ವೇಣು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್‌ ಆರ್‌.ಪಿ ಮಾತನಾಡಿದರು. ನರೇಗಾ ಯೋಜನೆಯ ಮಾಹಿತಿ ಶಿಕ್ಷಣ ಸಂವಹನ ಸಂಯೋಜಕಿ ಪಿ. ಸುಮಾ ಎನ್‌ಆರ್‌ಎಂಎಲ್‌ ಯೋಜನೆಯ ತಾಲ್ಲೂಕು ಸಂಯೋಜಕ ಜೆ. ನಂಜುಂಡಯ್ಯ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ಆರ್‌. ಶಿಲ್ಪಾ ನಾಗೇಂದ್ರ ಪ್ರಶಾಂತ್‌ಬಾಬು ಟಿ.ಎ ಹಾಗೂ ಕಾಲೇಜಿನ ಸಿಬ್ಬಂದಿ ಭಾಗವಹಿಸಿದ್ದರು. ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ‘ಮತದಾನ ಮಾಡಿ’ ಎಂಬ ಸಾಲು ನಿರ್ಮಿಸಿ ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.