ADVERTISEMENT

ಭಾರತೀನಗರ: ಚಿಕ್ಕಅರಸಿನಕೆರೆಯಲ್ಲಿ ಬಸವಪ್ಪನ ಪುಣ್ಯಾರಾಧನೆ

​ಪ್ರಜಾವಾಣಿ ವಾರ್ತೆ
Published 17 ಮೇ 2025, 12:05 IST
Last Updated 17 ಮೇ 2025, 12:05 IST
ಭಾರತೀನಗರ ಸಮೀಪದ ಚಿಕ್ಕಅರಸಿನಕೆರೆ ಕಾಲಭೈರವೇಶ್ವರಸ್ವಾಮಿ ಪುಣ್ಯಕ್ಷೇತ್ರದಲ್ಲಿ ಬಸವಪ್ಪನ 9ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಿತು
ಭಾರತೀನಗರ ಸಮೀಪದ ಚಿಕ್ಕಅರಸಿನಕೆರೆ ಕಾಲಭೈರವೇಶ್ವರಸ್ವಾಮಿ ಪುಣ್ಯಕ್ಷೇತ್ರದಲ್ಲಿ ಬಸವಪ್ಪನ 9ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಿತು   

ಭಾರತೀನಗರ: ಸಮೀಪದ ಚಿಕ್ಕಅರಸಿನಕೆರೆ ಗ್ರಾಮದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖಾ ಮಠವಾದ ಕಾಲಭೈರವೇಶ್ವರಸ್ವಾಮಿ ಪುಣ್ಯಕ್ಷೇತ್ರದಲ್ಲಿ ನಿರ್ಮಲಾನಂದನಾಥಸ್ವಾಮಿ, ಪ್ರಸನ್ನನಾಥಸ್ವಾಮಿ ಅವರ ಸಾನ್ನಿಧ್ಯದಲ್ಲಿ ಶನಿವಾರ ಬಸವಪ್ಪನ 9ನೇ ವರ್ಷದ ಪುಣ್ಯಾರಾಧನೆ ನಡೆಯಿತು.

ಬಸವನ ಗದ್ದುಗೆಯಲ್ಲಿ ಸ್ಥಾಪಿಸಲಾಗಿರುವ ಬಸವನ ಮೂರ್ತಿಗೆ ಗಂಧ, ಚಂದ್ರ, ವಿಭೂತಿ, ಕುಂಕುಮ, ಅರಿಸಿನ, ತುಪ್ಪ, ಜೇನುತುಪ್ಪ ಸೇರಿದಂತೆ ವಿವಿಧ ದ್ರವ್ಯಗಳಿಂದ ಮಹಾಭಿಷೇಕ ನೆರವೇರಿಸಲಾಯಿತು. ವಿವಿಧ ಪುಷ್ಟಗಳಿಂದ ಬಸವನ ಗದ್ದುಗೆ, ಮೂರ್ತಿಯನ್ನು ಅಲಂಕರಿಸಿ ಪೂಜೆ ನೆರವೇರಿಸಲಾಯಿತು.

ನೂರಾರು ಮಂದಿ ಭಕ್ತಾಧಿಗಳು, ಕಾಲಭೈರವೇಶ್ವರಸ್ವಾಮಿ ದೇವಾಲಯದ ಬಸವಪ್ಪ ಸಮ್ಮುಖದಲ್ಲಿ ವಿವಿಧ ಪೂಜೆಗಳನ್ನು ನೆರವೇರಿಸಿ ಕೊನೆಯಲ್ಲಿ ಮಹಾ ಮಂಗಳಾರತಿ ಮಾಡಲಾಯಿತು. ಪೂಜೆಗೆ ಬಂದಿದ್ದ ಎಲ್ಲ ಭಕ್ತಾದಿಗಳಿಗೂ ಪ್ರಸಾದ ವಿನಿಯೋಗ ನೆರವೇರಿಸಲಾಯಿತು. ಕಾಲಭೈರವೇಶ್ವರಸ್ವಾಮಿ ಚಾರಿಟಬಲ್‌ ಟ್ರಸ್ಟ್‌ನ ಎಲ್ಲ ಪದಾಧಿಕಾರಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.