ADVERTISEMENT

ಅನಂತಮೂರ್ತಿ ಹೇಳಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 10:09 IST
Last Updated 26 ಸೆಪ್ಟೆಂಬರ್ 2013, 10:09 IST

ಹುಣಸೂರು : ಜ್ಞಾನಪೀಠ ಪುರಸ್ಕೃತಿ ಸಾಹಿತಿ ಯು.ಆರ್‌. ಅನಂತಮೂರ್ತಿ ಅವರು ಬ್ರಾಹ್ಮಣ ಸಮಾಜದವರ ಮೇಲೆ ನೀಡಿರುವ ಹೇಳಿಕೆ ಖಂಡನೀಯ ಎಂದು ತಾಲ್ಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ  ಶ್ರೀಧರ್‌ ತಿಳಿಸಿದ್ದಾರೆ.

ಸಾಹಿತಿ ಅನಂತಮೂರ್ತಿ ಅವರು ಒಂದು ಸಮಾಜದ ಬಗ್ಗೆ ಮಾತನಾಡುವ ಮುನ್ನ ಅದರ ಸಾಧಕ ಬಾದಕವನು್ನ ಅವಲೋಕಿಸದೆ ಸಾರ್ವಜನಿಕ ಹೇಳಿಕೆ ನೀಡುವುದರಿಂದ ಒಂದು ವರ್ಗವನು್ನ ಅವಹೇಳನ ಮಾಡುತಿ್ತದ್ದಾರೆ. ಪ್ರಜಾಪ್ರಭುತ್ವದಲಿ್ಲ ಪ್ರತಿಯೊಬ್ಬರಿಗೂ ವಾಕ್‌ ಸ್ವಾತಂತ್ರ್ಯ ಇದ್ದರೂ ಮತ್ತೊಬ್ಬರಿಗೆ ನೋವಾಗುವ ರೀತಿ ಅಸಭ್ಯವಾಗಿ ಹೇಳಿಕೆ ನೀಡುವುದು ಸಾಹಿತ್ಯ ಕ್ಷೇತ್ರಕೆ್ಕ ಅವಮಾನ ಮಾಡಿದಂತೆ ಎಂದರು.

ಖಂಡನೆ: ತಾಲ್ಲೂಕು ವಿಪ್ರ ಮಹಿಳಾ ಸಂಘದ ಅಧ್ಯಕ್ಷೆ ಸತ್ಯವತಿ ಅವರು ಜ್ಞಾನಪೀಠ ಪುರಸ್ಕೃತ ಸಾಹಿತಿ ಅವರ ಹೇಳಿಕೆಯನು್ನ ಖಂಡಿಸಿದ್ದಾರೆ.

ಅತ್ಯಾಚಾರಿ ಬಂಧನ
ಹುಣಸೂರು: ಪಟ್ಟಣದ ಮೂರೂ­ರಮ್ಮದ ಬಡಾವಣೆಯಲ್ಲಿ ಮನೆಯಲ್ಲೇ ಸಾಕು ಮಗಳ ಮೇಲೆ ಅತಾ್ಯಚಾರ ನಡೆಸಿದ ಆರೋಪಿ ಮಣಿ ಮತು್ತ ಈತನ ಪತ್ನಿ ಸರೋಜಮ್ಮ ಅವರನು್ನ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮಣಿ ಮತ್ತು ಪತ್ನಿ ಸರೋಜಮ್ಮ ಅವರನ್ನು ಕುಶಾಲನಗರದ ಬಳಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ರಕ್ಷಣೆ: ಪ್ರಕರಣದಲಿ್ಲ  ನವಜಾತ ಶಿಶುವನು್ನ  ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿ್ತರುವ ತಾಯಿಗೆ ಹಸ್ತಾಂತರಿಸಲಾಗಿದೆ.

ಆರೋಪಿ ಮಣಿ ಮತು್ತ ಪತ್ನಿ ಅವರನು್ನ ನಾ್ಯಯಾಂಗ ವಶಕೆ್ಕ  ಒಪಿ್ಪಸಲಾಗಿದೆ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಗಜೇಂದ್ರ ಪ್ರಸಾದ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.