ADVERTISEMENT

ಅಳಿವಿನಂಚಿನಲ್ಲಿ ಸಿಐಐಎಲ್: ಸಚದೇವ್ ಆಕ್ರೋಶ

ಪ್ರಜಾವಾಣಿ ವಿಶೇಷ
Published 18 ಜುಲೈ 2012, 5:00 IST
Last Updated 18 ಜುಲೈ 2012, 5:00 IST

ಮೈಸೂರು: ಭಾರತೀಯ ಭಾಷೆಗಳ ಕೇಂದ್ರ ಸಂಸ್ಥಾನವು (ಸಿಐಐಎಲ್) ಇಡೀ ದೇಶದಲ್ಲಿಯೇ ಅಳಿವಿನಂಚಿನಲ್ಲಿ ರುವ ಸಂಸ್ಥೆ ಎಂದು ಸಂಸ್ಥೆಯ ಮಾಜಿ ನಿರ್ದೇಶಕ ಮತ್ತು ಭಾಷಾ ತಜ್ಞ ಪ್ರೊ. ರಾಜೇಶ್ ಸಚದೇವ್ ಕೇಂದ್ರ ಸರ್ಕಾರ ವನ್ನು ತರಾಟೆಗೆ ತೆಗೆದುಕೊಂಡರು.

ಮಂಗಳವಾರ ಸಿಐಐಎಲ್‌ನ 44ನೇ  ವಾರ್ಷಿಕೋತ್ಸವದ ಉದ್ಘಾ ಟನೆ ಸಮಾರಂಭದಲ್ಲಿ ಮಾತನಾಡಿದ ಅವರು, `ಇಲ್ಲಿಯ ಕಾಯಂ ನೌಕರರ ಸಂಖ್ಯೆಯನ್ನು 44ಕ್ಕೆ ಕಡಿತಗೊಳಿಸ ಲಾಗಿದೆ. ಸಿಬ್ಬಂದಿ ಕಡಿತದಿಂದಾಗಿ ಇಲ್ಲಿ ಕಾರ್ಯನಿರ್ವಹಿಸುವುದು ಕಷ್ಟದ ಕೆಲಸವಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ತುರ್ತು ನಿರ್ಧಾರ ಕೈಗೊಳ್ಳ ದಿದ್ದರೆ ಯೋಜನೆ ಯಶಸ್ವಿ ಗೊಳಿಸು ವುದು ಕಠಿಣವಾಗುತ್ತದೆ~ ಎಂದರು.

`ಭಾಷಾವೈವಿಧ್ಯವಿರುವ ಭಾರತ ದಲ್ಲಿ ಸಿಐಐಎಲ್ ಅಸ್ತಿತ್ವ ಬಹಳ ಮಹತ್ವದ್ದು. ಭಾಷೆಗಳ ಸಂರಕ್ಷಣೆ ಯನ್ನು ಮಾಡುತ್ತಿರುವ ಸಂಸ್ಥೆಯು ಭಾಷಾ ಕಾವಲುಗಾರನಾಗಿ ಕೆಲಸ ಮಾಡುತ್ತಿರುವುದು ಇಡೀ ವಿಶ್ವಕ್ಕೆ ಮಾದರಿ. ಸರ್ಕಾರವು ಸಂಪೂರ್ಣ ಅಸ್ಥೆ ವಹಿಸಿ ಈ ಸಮಸ್ಯೆಯನ್ನು ಬಗೆ ಹರಿಸದೇ ಹೋದರೆ, ಸರ್ಕಾರವೇ ಈ ಸಂಸ್ಥೆಯನ್ನು ಕೊಲೆ ಮಾಡಿದಂತೆ ಆಗು ತ್ತದೆ~ ಎಂದು ಕಟುವಾಗಿ ನುಡಿದರು. 

ದೇಶದೊಳಗಿನ ಸೈನಿಕರು
ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯ ದರ್ಶಿ ಪ್ರೊ. ಅಗ್ರಹಾರ ಕೃಷ್ಣಮೂರ್ತಿ, `ಭಾಷೆ, ಸಂಸ್ಕೃತಿ, ಜನಪದ, ಜೀವನ ಶೈಲಿ, ಸಂಸ್ಕಾರ, ಪರಂಪರೆ, ಆರ್ಥಿಕತೆ, ಕೃಷಿ ಎಲ್ಲವೂ ಒಂದಕ್ಕೊಂದು ಬೆಸೆದು ಕೊಂಡ ಸಂಗತಿ ಗಳು. ಅಂತಹ ಭಾಷೆಯ ಕುರಿತು ಅಧ್ಯಯನ ಮಾಡಿ ಉಳಿಸಲು ಹೋರಾಡುತ್ತಿರುವ ಸಿಐ ಐಎಲ್ ಸಂಶೋಧಕರನ್ನು ಸೈನಿಕರು ಎಂದೇ ಕರೆಯಬೇಕು. ಗಡಿ ಕಾಯುವ ಸೈನಿಕ ರಂತೆಯೇ ನೀವೆಲ್ಲ ದೇಶದೊ ಳಗಿನ ಭಾಷಾ ಸಂಪತ್ತು ಮತ್ತು ಅದಕ್ಕೆ ಬೆಸೆದುಕೊಂಡಿರು ಸಮಾಜವನ್ನು ಕಾಯುತ್ತಿದ್ದೀರಿ~ ಎಂದರು.

`ಕುಸ್ತಿ ಕಲೆಗೆ ಹೆಸರುವಾಸಿ ಯಾಗಿರುವ ಜಟ್ಟಿ ಜನಾಂಗ ನಮ್ಮದು. ಕರ್ನಾಟಕದಲ್ಲಿ ಮಾತ್ರ ಅದು ಅಲ್ಲಲ್ಲಿ ಇದೆ ಎಂದು ತಿಳಿದಿದ್ದೆ. ನಮ್ಮ ತಂದೆ, ತಾತಂದಿರುವ ತೆಲುಗು ಮಾತನಾಡು ವುದು ಗೊತ್ತಿತ್ತು. ಆದರೆ ನಾನು ಮಾತ್ರ ಕನ್ನಡದವನೇ ಆದೆ. ಕೆಲವು ವರ್ಷದ ಹಿಂದೆ ಗುಜರಾತ್ ರಾಜ್ಯದ ಕಛ್ ಪ್ರದೇಶಕ್ಕೆ ಹೋದಾಗ ನಮ್ಮ ಜನಾಂಗದವರನ್ನು ಕಾಣುವ ಅವಕಾಶ ಸಿಕ್ಕಿತು. ಕಛ್ ಪ್ರದೇಶದಲ್ಲಿ ನಡೆಯುತ್ತಿದ್ದ ಉತ್ಸವದಲ್ಲಿ ದೇವಿ ಆರಾಧನೆಯನ್ನು ನೋಡಿ, ಅಲ್ಲಿಯ ವ್ಯಕ್ತಿಯೊಬ್ಬರಿಗೆ ಇಲ್ಲಿ ನಿಂಬುಜಾ ದೇವಿಯ ಆರಾಧನೆಯೂ ಇದೆಯೇ ಎಂದು ಕೇಳಿದೆ. ಆಗ ಆ ವ್ಯಕ್ತಿ ನಿಂಬುಜಾದೇವಿಯನ್ನು ಪೂಜಿ ಸುವ ಕುಟುಂಬಗಳಿವೆ ಬನ್ನಿ ಎಂದು ಕರೆದುಕೊಂಡು ಹೋಗಿ ಪರಿಚಯಿ ಸಿದ. ಗುಜರಾತಿನಿಂದ ಕರ್ನಾಟಕಕ್ಕೆ ಜಟ್ಟಿ ಜನಾಂಗದವರು ಬಂದರೋ ಅಥವಾ ಕರ್ನಾಟಕದಿಂದ ಹೋಗಿ ಅಲ್ಲಿ ನೆಲೆಸಿದರೋ ಗೊತ್ತಿಲ್ಲ. ಆದರೆ ಒಂದು ಪರಂಪರೆಯ ಮೂಲಕ ಜನಾಂಗ ಬೆಸೆದ ರೀತಿ ಅನನ್ಯ~ ಎಂದರು.

ನಿರ್ದೇಶಕ ಡಾ. ಎಸ್.ಎನ್. ಬರ್ಮನ್ ಅಧ್ಯಕ್ಷತೆ ವಹಿಸಿದ್ದರು. ಅಳಿವಿನಂಚಿನ ಸೈಮರ್ ಭಾಷೆಯ ವಯೋವೃದ್ಧ ಸುಕೃತಾಂಗ್ ಸೈಮರ್ ಅವರನ್ನು ಸನ್ಮಾನಿಸಲಾಯಿತು.

ಮಾಜಿ ನಿರ್ದೇಶಕರಾದ ಪ್ರೊ. ಪಟ್ನಾಯಿಕ್, ಪ್ರೊ.ಎನ್. ರಾಮ ಸ್ವಾಮಿ, ಪ್ರೊ. ಕೌಲ್ ಹಾಜರಿದ್ದರು. ಐಐಎಲ್ ಉಪನಿರ್ದೇಶಕ ಡಾ. ಆರ್. ಸುಬ್ಬುಕೃಷ್ಣ ಸ್ವಾಗತಿಸಿದರು. ಡಾ.ಕೆ. ಶ್ರೀನಿವಾಸಾಚಾರ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.