ADVERTISEMENT

ಆರ್ಥಿಕ ಸಮಾನತೆ ಇಂದಿನ ಅಗತ್ಯ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 7:45 IST
Last Updated 27 ಡಿಸೆಂಬರ್ 2012, 7:45 IST

ಮೈಸೂರು: ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ಆರ್ಥಿಕ ಸಮಾನತೆ ಬಂದಾಗ ಮಾತ್ರ ಬದಲಾವಣೆ ಸಾಧ್ಯ. ಆದರೆ, ಜಾತಿ, ವರ್ಣ, ವರ್ಗರಹಿತ ಸಮಾಜ ಇದುವರೆಗೂ ನಿರ್ಮಾಣವಾಗದೇ ಇರುವುದು ದುರಂತ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಶ್ರೀ ಕನಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹೂಟಗಳ್ಳಿಯ ಕೆಎಚ್‌ಬಿ ಕಾಲೊನಿಯಲ್ಲಿ ಬುಧವಾರ ಏರ್ಪಡಿಸಿದ್ದ ಕನಕದಾಸರ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಕನಕದಾಸರು ದಾರ್ಶನಿಕ, ಸಮಾಜ ಸುಧಾರಕರಾಗಿದ್ದರು. ಬಸವಣ್ಣ ಮತ್ತು ಕನಕದಾಸರು ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದು, ಬದಲಾವಣೆ ಬಯಸಿದವರು. ಹೀಗಾಗಿ ಅವರ ಆದರ್ಶಗಳು ಇಂದು ಪ್ರಸ್ತುತವಾಗಿವೆ. ಜಾತಿ ವ್ಯವಸ್ಥೆಯಿಂದ ಆರ್ಥಿಕ, ಸಾಮಾಜಿಕ ಕಂದಕ ಹಾಗೆಯೇ ಉಳಿದಿದೆ. ಆದರೆ ಜಾತಿ ವ್ಯವಸ್ಥೆ ಗಟ್ಟಿಯಾಗಿ ಬೆಳೆದಿದೆ ಎಂದರು.

ಸಂಸದ ಎಚ್.ವಿಶ್ವನಾಥ್, ಶಾಸಕ ಎಂ.ಸತ್ಯನಾರಾಯಣ, ಪ್ರೊ.ಸುಧಾಕರ್ ಮಾತನಾಡಿದರು. ಶಿವಾನಂದಪುರಿ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಸದಸ್ಯ ಎಂ.ಮಹಾದೇವ್, ಡಾ.ಜಿ.ಆರ್. ಜಗನ್ನಾಥ್‌ಬಾಬು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗರತ್ನ ಮಹಾದೇವ್, ಕೋಟೆಹುಂಡಿ ಮಹಾದೇವ್, ಹಿನಕಲ್ ಬಸವೇಗೌಡ, ಸಂಘದ ಅಧ್ಯಕ್ಷ ಜಯಣ್ಣೇಗೌಡ, ಕಾರ್ಯಾಧ್ಯಕ್ಷ ಎಂ.ಶಿವಪ್ಪ, ಉಪಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಜಯರಾಮೇಗೌಡ, ಖಜಾಂಚಿ ಕೆ.ಮಹಾದೇವು, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.