ADVERTISEMENT

`ಕಂಪ್ಯೂಟರ್ ಶಿಕ್ಷಣ ಅನಿವಾರ್ಯ'

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 9:51 IST
Last Updated 3 ಏಪ್ರಿಲ್ 2013, 9:51 IST

ಮೈಸೂರು: ಜಾಗತೀಕರಣದಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಇವತ್ತು ಪೈಪೋಟಿ ಹೆಚ್ಚಿದ್ದು, ಕಂಪ್ಯೂಟರ್ ಶಿಕ್ಷಣ ಪಡೆಯುವುದು ಅನಿವಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ಹಾಗೂ ಶಾಲೆಗಳಲ್ಲಿ ವಿಜ್ಞಾನ ಅಭಿವೃದ್ಧಿ ಸಮಿತಿ ಆಶ್ರಯದಲಿ ಮಂಗಳವಾರ ಆಯೋಜಿಸಲಾಗಿದ್ದ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ 4 ದಿನಗಳ ತರಬೇತಿ ಸಮಾರಂಭವನ್ನು ಉದ್ಘಾಟಿಸಿದ ಮಾತನಾಡಿದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ಬಸವರಾಜ್, `ಪಠ್ಯ ಅಥವಾ ಪಠ್ಯೇತರ ವಿಷಯಗಳಲ್ಲಿ ಕಲಿಯುವ ಅವಕಾಶಗಳು ಸಿಕ್ಕಾಗ ಯಾವುದೇ ಹಿಂಜರಿಕೆಯಲ್ಲದೇ ಕಲಿತು ಬಿಡಬೇಕು. ಅದು ನಮಗೆ ಹೇಗೆ ಬಳಕೆ ಯಾಗುತ್ತದೆ ಎಂಬ ಚಿಂತೆ ಬಿಟ್ಟು ಆಸಕ್ತಿ ವಹಿಸಿ ಕಲಿತುಬಿಡಬೇಕು' ಎಂದರು.

`ಈ ಮೊದಲು ಸರ್ಕಾರವು 1,000 ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಆರಂಭಿಸಿ, ನಂತರ ಎಲ್ಲ ಸರ್ಕಾರ ಶಾಲೆಗಳಿಗೂ ವಿಸ್ತರಿಸಿತ್ತು. ಮುಂದಿನ ಹಂತದಲ್ಲಿ ಅನುದಾನಿತ ಶಾಲೆಗಳಿಗೂ ಕಂಪ್ಯೂಟರ್ ಶಿಕ್ಷಣ ಸೌಲಭ್ಯಗಳನ್ನು ನೀಡುವ ಬಗ್ಗೆ ಯೋಜನೆ ರೂಪಿಸಲಾ ಗುತ್ತಿದೆ' ಎಂದರು.

ಪಡುವಾರಹಳ್ಳಿ ಮತ್ತು ಗಂಗೋತ್ರಿ ಶಾಲೆಗಳು ಸೇರಿದಂತೆ ಒಟ್ಟು 60 ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ತರಬೇತಿಯಲ್ಲಿ ಭಾಗವಹಿಸಿದ್ದಾರೆ. ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಅಮೃತವಳ್ಳಿ, ಪ್ರೊ. ಅಯ್ಯಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.