ADVERTISEMENT

ಗಮನ ಸೆಳೆದ ರಸ್ತೆ ಓಟ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 2 ಮೇ 2011, 10:55 IST
Last Updated 2 ಮೇ 2011, 10:55 IST

ಮೈಸೂರು: ರಜಾ ದಿನವಾದರೂ ಜನ ಜಾತ್ರೆ.. ನಾ ಮುಂದು ತಾ ಮುಂದು ಎಂದು ಓಡಲು ಮುಂದಾದ ಚಿಣ್ಣರು..ತಾವೂ  ಏನು  ಕಮ್ಮಿ ಇಲ್ಲ ಎಂದು ಪೈಪೋಟಿ ನೀಡಿದ ವಯೋವೃದ್ಧರು..ಗುರಿ ತಲುಪಿದ ಉತ್ಸಾಹದಲ್ಲಿ ಕುಣಿದಾಡಿದ ಮಕ್ಕಳು..

-ಇವು ಜಿಲ್ಲಾಧಿಕಾರಿ ಕಚೇರಿ ಎದುರು ಮೈಸೂರು ಜಿಲ್ಲಾ ಮಾಸ್ಟರ್ಸ್‌ ಅಥ್ಲೆಟಿಕ್ ಅಸೋಸಿಯೇಷನ್ ಭಾನುವಾರ ಏರ್ಪಡಿಸಿದ್ದ ಆರ್‌ಎನ್ ಎಂ ಸ್ಮಾರಕ ರಸ್ತೆ ಓಟದಲ್ಲಿ ಕಂಡು ಬಂದ ದೃಶ್ಯಗಳು.

6 ರಿಂದ 14 ವರ್ಷ, 15 ರಿಂದ 35 ವರ್ಷ ಹಾಗೂ 35 ರಿಂದ 70 ವರ್ಷ ವಯೋಮಾನದವರಿಗೆ ಹಮ್ಮಿಕೊಂಡಿದ್ದ ಓಟದ ಸ್ಪರ್ಧೆ ಯಲ್ಲಿ 300ಕ್ಕೂ ವಿದ್ಯಾರ್ಥಿಗಳು, ಪುರುಷರು ಹಾಗೂ ಮಹಿಳೆಯರು ಭಾಗವಹಿಸಿದ್ದರು. ಅಥ್ಲೆಟಿಕ್ಸ್‌ನಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ  ಮಟ್ಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳೂ ಭಾಗವಹಿಸುವ ಮೂಲಕ ವೀಕ್ಷಕರ ಗಮನ ಸೆಳೆದರು. ಜೊತೆಗೆ  ಚಿಣ್ಣರಿಗೆ ಪ್ರೋತ್ಸಾಹ ನೀಡಿದರು.

ಸ್ಪರ್ಧಾಳುಗಳು ಜಿಲ್ಲಾಧಿಕಾರಿ ಕಚೇರಿಯಿಂದ ಓಟ ಆರಂಭಿಸಿ ಕ್ರಾಫರ್ಡ್ ಹಾಲ್, ಮಹಾರಾಜ ಕಾಲೇಜು ವಿದ್ಯಾರ್ಥಿ ನಿಲಯ, ರಾಮಸ್ವಾಮಿ ವೃತ್ತ, ಮುಡಾ ಕಚೇರಿ ಮಾರ್ಗವಾಗಿ ಮತ್ತೆ ಜಿಲ್ಲಾಧಿಕಾರಿ ಕಚೇರಿ ತಲುಪಿದರು.

ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಸಯ್ಯದ್ ಮುಬೀನ್, ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಕರ್ನಾಟಕ  ಕಾರ್ಯದರ್ಶಿ ವಿ.ಕೃಷ್ಣಮೂರ್ತಿ, ಅಥ್ಲೆಟಿಕ್ ಅಸೋಸಿಯೇಷನ್ ಮತ್ತು ಅಥ್ಲೆಟಿಕ್ ಅಧಿಕಾರಿಗಳ ಬೋರ್ಡ್‌ನ ಕಾರ್ಯದರ್ಶಿಗಳಾದ ಪಿ.ಜಿ.ಸತ್ಯ ನಾರಾಯಣ, ಸಿ.ಡಿ.ಮುರಳಿ, ಮೈಸೂರು ಜಿಲ್ಲಾ ಮಾಸ್ಟರ್ಸ್‌ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷೆ ಸುಮನಾ ನರಸಿಂಹಮೂರ್ತಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಫಲಿತಾಂಶದ ವಿವರ

ವಿದ್ಯಾರ್ಥಿಗಳ ವಿಭಾಗ (16 ವರ್ಷ ಒಳಗೆ): ಸಿ.ಎನ್.ತೇಜೇಶ್ (ಪ್ರಥಮ), ಬಿ.ಜಿ.ಪವನ (ದ್ವಿತೀಯ), ಸುಮನ್ ವೈದ್ಯನಾಥ್ (ತೃತೀಯ).
ವಿದ್ಯಾರ್ಥಿನಿಯರ ವಿಭಾಗ: ಮೇಘಾ (ಪ್ರಥಮ), ಲತಾಶ್ರೀ (ದ್ವಿತೀಯ), ಎಂ.ವೀಣಾ (ತೃತೀಯ).
ಮಹಿಳೆಯರ ವಿಭಾಗ (35ರಿಂದ 49 ವರ್ಷ): ಎಸ್.ಆರ್.ಶ್ರಿದೇವಿ (ಪ್ರಥಮ), ಎ.ಬಿ.ಪುಷ್ಪಲತಾ (ದ್ವಿತೀಯ), ಬಿ.ಸುಮಿತ್ರಾ (ತೃತೀಯ).
ಪುರುಷರ ವಿಭಾಗ: ಎಂ.ಯೋಗೇಂದ್ರ (ಪ್ರಥಮ), ಎಂ.ಎಂ.ನಾಣಯ್ಯ (ದ್ವಿತೀಯ), ನಾಗೇಂದ್ರ (ತೃತೀಯ).
ಮಹಿಳೆಯರ ವಿಭಾಗ (50 ವರ್ಷ ಮೇಲ್ಪಟ್ಟು): ಬಿ.ಸಿ.ಪವಿತ್ರಾ (ಪ್ರಥಮ), ರಮಣಿ (ದ್ವಿತೀಯ), ಅನ್ನಪೂರ್ಣ ಕುರ್ವಿನಕೊಪ್ಪ (ತೃತೀಯ).
ಪುರುಷರ ವಿಭಾಗ (50 ವರ್ಷ ಮೇಲ್ಪಟ್ಟು): ಪುಟ್ಟಣ್ಣಾಚಾರ್ (ಪ್ರಥಮ), ಬಿ.ಬಸವರಾಜ್ (ದ್ವಿತೀಯ), ಸೋಮೇಗೌಡ (ತೃತೀಯ).
65 ವರ್ಷ ಮೇಲ್ಪಟ್ಟ ವಿಭಾಗ: ಕೆ.ಎಲ್.ಪಾಟೀಲ (ಪ್ರಥಮ), ಎಂ.ವಿ.ವಿ.ಸ್ವಾಮಿ (ದ್ವಿತೀಯ), ಕೆ.ಸಿ.ಪೂವಯ್ಯ (ತೃತೀಯ).
ಮಹಿಳೆಯರ ವಿಭಾಗ (65 ವರ್ಷ ಮೇಲ್ಪಟ್ಟು): ಪಾರ್ವತಿ ಕಾಂತರಾಜ್ (ಪ್ರಥಮ), ಕೆ.ಎಸ್.ಸೀತಮ್ಮ (ದ್ವಿತೀಯ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.