ADVERTISEMENT

‘ಚಾಮರಾಜನಗರ ಜಿಲ್ಲೆಯಲ್ಲಿ 4ಜಿ ಸೇವೆ’

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 5:39 IST
Last Updated 30 ಡಿಸೆಂಬರ್ 2017, 5:39 IST

ಮೈಸೂರು: ಚಾಮರಾಜನಗರ ಜಿಲ್ಲೆಯಲ್ಲಿ ಗ್ರಾಹಕರಿಗೆ 4ಜಿ ಸೇವೆ ಒದಗಿಸಲು 19 ಟವರ್‌ಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಭಾರತ್‌ ಸಂಚಾರ್‌ ನಿಗಮ್‌ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ಮೈಸೂರು ವಿಭಾಗದ ಪ್ರಧಾನ ವ್ಯವಸ್ಥಾಪಕ ಕೆ.ಎಲ್‌.ಜೈರಾಂ ತಿಳಿಸಿದರು.

ಬಿಎಸ್‌ಎನ್ಎಲ್‌ ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಹಕರ ಅರಿವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚಾಮರಾಜನಗರ ಜಿಲ್ಲೆಯಲ್ಲಿ 4ಜಿ ಸೇವೆ ಆರಂಭಿಸಲು ಎಲ್ಲ ಸಿದ್ಧತೆ ನಡೆಸಲಾಗಿದೆ. ಮಾರ್ಚ್ ಅಂತ್ಯದೊಳಗೆ 4ಜಿ ಸೇವೆ ದೊರೆಯಲಿದೆ. ಇಂಟರ್‌ನೆಟ್‌ ವೇಗ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ವಾಣಿಜ್ಯ ಕರೆ ಮತ್ತು ಅನಪೇಕ್ಷಿತ ಕರೆಗಳು ಬರುವುದರಿಂದ ತೊಂದರೆಯಾಗುತ್ತದೆ ಎಂದು ಸಾಕಷ್ಟು ಗ್ರಾಹಕರು ದೂರು ನೀಡಿದ್ದಾರೆ. ಈ ಬಗ್ಗೆ ಗಮನಹರಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ‘ಮೈ ಸ್ಪೀಡ್‌’ ಮತ್ತು ‘ಮೈ ಕಾಲ್‌’ ಎಂಬ ಆ್ಯಪ್‌ ಬಿಡುಗಡೆ ಮಾಡಿದೆ. ‘ಮೈ ಸ್ಪೀಡ್ ಆ್ಯಪ್‌’ನಲ್ಲಿ ಗ್ರಾಹಕರು 3ಜಿ ಮತ್ತು 4ಜಿ ಡೇಟಾ ವೇಗವನ್ನು ಅಳೆಯುವ ವ್ಯವಸ್ಥೆ ಇದೆ. ಕರೆ ಮಾಡುವಾಗ ಅಥವಾ ಬಂದಾಗ ಬೇರೆ ಧ್ವನಿ ಕೇಳುವುದು, ಕರೆ ಕಡಿತ ಮೊದಲಾದ ಸಮಸ್ಯೆಗಳ ಬಗ್ಗೆ ‘ಮೈ ಕಾಲ್’ ಮೂಲಕ ದೂರು ನೀಡಬಹುದು ಎಂದು ವಿವರಿಸಿದರು.

ಬಿಎಸ್‌ಎಸ್‌ಎಲ್‌ಗೆ ಸಿಮ್‌ಗೆ ಆಧಾರ್‌ ಜೋಡಣೆ ಮಾಡಿಸಲು ಗ್ರಾಹಕರು ಹತ್ತಿರದ ಕಚೇರಿಗಳಿಗೆ ಮೊಬೈಲ್ ತೆಗೆದುಕೊಂಡು ಹೋಗಬೇಕು ಎಂಬ ದೂರುಗಳು ಬಂದಿವೆ. ಒಟಿಪಿ ಸಂಖ್ಯೆ ಮೂಲಕ ಆಧಾರ್‌ ಜೋಡಣೆ ಮಾಡುವ ವ್ಯವಸ್ಥೆ ಶೀಘ್ರ ಜಾರಿಗೆ ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.