ADVERTISEMENT

ಜೈಲಿನಲ್ಲೇ ಧ್ಯಾನ ಕೇಂದ್ರ ಆರಂಭ: ಗಗನ ದೀಪ್

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 8:37 IST
Last Updated 19 ಡಿಸೆಂಬರ್ 2012, 8:37 IST

ಮೈಸೂರು: ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಧ್ಯಾನ ಕೇಂದ್ರವನ್ನು ಆರಂಭಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಾರಾಗೃಹ ಗಳ ಮಹಾನಿರೀಕ್ಷಕ ಗಗನ್ ದೀಪ್ ತಿಳಿಸಿದರು.

ನಗರದ ಕೇಂದ್ರ ಕಾರಾಗೃಹ ಆವರಣದಲ್ಲಿ ಆಯೋಜಿಸಿದ್ದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಧ್ಯಾನ ಮಂದಿರದ 12ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಕೈದಿಗಳು ಕಾರಾಗೃಹಕ್ಕೆ ಬಂದ ತಕ್ಷಣ ಖಿನ್ನತೆಗೆ ಒಳಗಾಗು ತ್ತಿದ್ದಾರೆ. ಅವರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ ಉತ್ತಮ ಬದುಕು ನಡೆಸಲು ಧ್ಯಾನ ಕೇಂದ್ರಗಳು ಅಗತ್ಯವಾಗಿದ್ದು, ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಧ್ಯಾನ ಕೇಂದ್ರಗಳನ್ನು ಆರಂಭಿಸಲಿಕ್ಕೆ ಸಂಘ ಸಂಸ್ಥೆಗಳು ಮುಂದೆ ಬಂದರೆ ಅವರಿಗೆ ಅಗತ್ಯ ಬೆಂಬಲ ನೀಡಲಾಗುವುದು ಎಂದರು.

ಕಾರಾಗೃಹದಲ್ಲಿ ಈಗ ಇರುವ ಅನೇಕ ಕೈದಿಗಳು ಕೊಲೆ ಪ್ರಕರಣದ ಆರೋಪ ಹೊತ್ತು ಬಂದಿದ್ದಾರೆ. ಇವರು ಕೊಲೆಯಲ್ಲಿ ನೇರ ಭಾಗಿದಾರರಾಗದೇ ಇದ್ದರೂ ಅವರನ್ನು ಆರೋಪ ಹೊರಿಸಿ ಜೈಲಿಗೆ ಹಾಕಲಾಗುತ್ತಿದೆ.  ಇವರನ್ನು ಪೊಲೀಸರೇ ಜೈಲಿನೊಳಗೆ ಹಾಕಿದ್ದಾರೆ ಎನ್ನುವ ತಪ್ಪು ಕಲ್ಪನೆ ಹೊರ ಹಾಕಬೇಕು ಎಂದರು.

ಕೊಲೆಯಂತಹ ಅಪರಾಧ ಮಾಡಿರುವವ ರನ್ನು ಜೈಲಿನಲ್ಲಿ ಮನಪರಿವರ್ತನೆ ಮಾಡ ಬಹುದು. ಅದರಲ್ಲಿ ನಾವು ಯಶಸ್ವಿಯೂ ಆಗಿದ್ದೇವೆ. ಆದರೆ ಕಳ್ಳತನ ಮಾಡಿ ಜೈಲಿಗೆ ಬರುವವರನ್ನು ಮನಪರಿವರ್ತನೆ ಮಾಡುವುದೇ ನಮ್ಮ ಮುಂದಿರುವ ದೊಡ್ಡ ಸವಾಲು.

ಕೈದಿಗಳ ಮನಪರಿವರ್ತನೆಗೆ ಸಂಗೀತ ಮುಖ್ಯ ಸಾಧನ. ಆದ್ದರಿಂದ ಗುಲ್ಬರ್ಗಾ ಮತ್ತು ಮೈಸೂರು ಕಾರಾಗೃಹಗಳಲ್ಲಿ ರೂ.4 ಲಕ್ಷ ವೆಚ್ಚದಲ್ಲಿ ಆರ್ಕೆಸ್ಟ್ರಾ ಉಪಕರಣಗಳನ್ನು ಖರೀದಿ ಮಾಡ ಲಾಗಿದೆ. ಕೈದಿಗಳಲ್ಲಿರುವ ಪ್ರತಿಭೆ ಹೊರಹಾಕಲು ಈ ಆರ್ಕೆಸ್ಟ್ರಾ ತಂಡಗಳಿಂದ ಕಾರಾಗೃಹದ ಹೊರಗೆ ಕಾರ್ಯಕ್ರಮ ಏರ್ಪಡಿಸಲಾಗುವುದು. ಕಾರಾಗೃಹ ಕೈದಿಗಳಿಗಾಗಿಯೇ ಪ್ರತಿ ಶನಿವಾರ ಸಂಗೀತ ಸಂಜೆ ಕಾರ್ಯಕ್ರಮ ನಡೆಸಲಾಗು ವುದು. ಕ್ರೀಡಾ ಮನೋಭಾವ ಉಳ್ಳವರಿಗಾಗಿ ಕಾರಾಗೃಹದಲ್ಲಿ ಈಗಾಗಲೇ ಅಗತ್ಯ ಪರಿಕರ ನೀಡಲಾಗಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕರೆಕ್ಷನಲ್ ಅಡ್‌ಮಿನಿಸ್ಟ್ರೇಷನ್: ನವದೆಹಲಿ ಯಲ್ಲಿ ಜನವರಿ 9ಮತ್ತು 10ರಂದು ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮೇಳನ ವನ್ನು ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ `ಪ್ರಿಸನ್ ಅಡ್‌ಮಿನಿಸ್ಟ್ರೇಷನ್' ಎನ್ನುವ ಹೆಸರನ್ನು ತೆಗೆದುಹಾಕಿ `ಕರೆಕ್ಷನಲ್ ಅಡ್‌ಮಿನಿಸ್ಟ್ರೇಷನ್' ಎಂದು ಮರುನಾಮಕರಣ ಮಾಡುವ ಉದ್ದೇಶ ಹೊಂದಲಾಗಿದೆ. ಆಡಳಿತ ವ್ಯವಸ್ಥೆ ಜನಸ್ನೇಹಿ ಯಾಗಿ ಬದಲಾಗುತ್ತಿದ್ದರೆ ನೀವು ಬದಲಾಗ ಬೇಕು. ಕಾರಾಗೃಹ ಸಿಬ್ಬಂದಿ ಮತ್ತು ಕೈದಿಗಳ ನಡುವೆ ಬಾಂಧವ್ಯ ಬೆಳೆಯಬೇಕು ಎಂದರು.

ಡಿಐಜಿ (ಹೆಡ್‌ಕ್ವಾಟರ್ಸ್) ವಿ.ಎಸ್.ರಾಜ ಮಾತನಾಡಿದರು. ಕೇಂದ್ರ ಕಾರಾಗೃಹ ನಿವೃತ್ತ ಅಧೀಕ್ಷಕ ಪಿ.ಮಲ್ಲೇಶ್, ಕಾರಾಗೃಹದ ಪರಿವರ್ತಿತ ಹಿರಿಯ ಶಿಕ್ಷಣಾರ್ಥಿ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು. ಕೇಂದ್ರ ಕಾರಾ ಗೃಹ ಮುಖ್ಯ ಅಧೀಕ್ಷಕ ಪಿ.ಎನ್.ಜಯಸಿಂಹ, ಉಪಮಹಾನಿರೀಕ್ಷಕ ಎಂ.ಸಿ.ವಿಶ್ವನಾಥಯ್ಯ, ಈಶ್ವರೀಯ ವಿಶ್ವವಿದ್ಯಾನಿಲಯ ಮುಖ್ಯ ಸಂಚಾಲಕಿ ಲಕ್ಷ್ಮೀಜಿ, ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.