ADVERTISEMENT

ತಿ.ನರಸೀಪುರ: ಮತ ಎಣಿಕೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 9:35 IST
Last Updated 4 ಜನವರಿ 2011, 9:35 IST

ತಿ.ನರಸೀಪುರ: ಮಂಗಳವಾರ ನಡೆಯಲಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮತ ಎಣಿಕೆಗಾಗಿ ಸಕಲ ಸಿದ್ಧತೆ ಮಾಡಿ ಕೊಂಡಿರುವುದಾಗಿ ತಾಲ್ಲೂಕು ಚುನಾ ವಣಾಧಿಕಾರಿ ಕೆ.ಆರ್.ಕೃಷ್ಣಯ್ಯ ತಿಳಿಸಿದ್ದಾರೆ. ಮತ ಎಣಿಕೆ ನಡೆಯುವ ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ 3 ಟೇಬಲ್‌ಗೆ ತಲಾ ಮೂವರು ಹಾಗೂ ತಾ.ಪಂ  ಕ್ಷೇತ್ರದಲ್ಲಿ 1 ಟೇಬಲ್‌ಗೆ ಒಬ್ಬರಿಗೆ ಅವಕಾಶ ನೀಡಲಾಗುತ್ತದೆ.
 
ಅಭ್ಯರ್ಥಿಗಳಿಗೆ ಅಥವಾ ಅವರು ಸೂಚಿಸುವ ಒಬ್ಬ  ಏಜೆಂಟರಿಗೆ ಗುರುತಿನ ಚೀಟಿ ನೀಡಲಾಗಿದೆ. ಜಿ.ಪಂ ಮತ ಎಣಿಕೆಗೆ ಎರಡು ಕೊಠಡಿಗಳನ್ನು ನಿಗದಿಪಡಿಸಲಾಗಿದೆ.  ತಾಲ್ಲೂಕು ಪಂಚಾಯಿತಿಗೆ 6 ಕೊಠಡಿಗಳನ್ನು ನಿಗದಿಪಡಿಸಲಾಗಿದೆ. ಒಂದು ಕೊಠಡಿ ಯನ್ನು ಮಾಧ್ಯಮದವರಿಗೆ,  ಮತ್ತೊಂದು ಕೊಠಡಿಯನ್ನು ಅಂಕಿ ಅಂಶಗಳನ್ನು ನೀಡುವ ಗಣಕಯಂತ್ರ ವಿಭಾಗಕ್ಕೆ ಮೀಸಲಿಡಲಾಗಿದೆ. ಒಂದನ್ನು   ವೀಕ್ಷಕರಿಗೆ ಮೀಸಲಿಡ ಲಾಗಿದೆ. ಮತ ಎಣಿಕೆಯಲ್ಲಿ ಭಾಗ ವಹಿಸುವ ಪ್ರತಿನಿಧಿಗಳು ಬೆಳಗ್ಗೆ 7.45 ಕ್ಕೆ  ಕೊಠಡಿಯೊಳಗಿರಬೇಕು. ಅಧಿಕಾರಿಗಳು ಸೇರಿದಂತೆ ಮತ ಎಣಿಕೆಯಲ್ಲಿ ಭಾಗವಹಿಸುವ ಎಲ್ಲ ರಿಗೂ ಮೊಬೈಲ್ ಬಳಕೆಯನ್ನು ಕಡ್ಡಾಯವಾಗಿ  ನಿಷೇಧಿಸಲಾಗಿದೆ.

ಬೆಳಿಗ್ಗೆ8ಕ್ಕೆ ಪಟ್ಟಣ ವಿದ್ಯೋದಯದ ಶಿವಾನಂದ ಶರ್ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತ ಏಣಿಕೆ  ಪ್ರಾರಂಭವಾಗುವುದರಿಂದ ಮಧ್ಯಾಹ್ನ 12 ರ ಒಳಗೆ ಎಲ್ಲಾ ಕ್ಷೇತ್ರದ ಫಲಿತಾಂಶ ಹೊರ ಬೀಳುವ ನಿರೀಕ್ಷೆ ಇದೆ  ಎಂದು ತಿಳಿಸಿದರು. ಸಂಖ್ಯೆ 1 ರ ಕೊಠಡಿ ಸಂಖ್ಯೆಯಲ್ಲಿ ತುರುಗನೂರು ಜಿ.ಪಂ ಕ್ಷೇತ್ರ, ಸೋಮನಾಥಪುರ, ಸೋಸಲೆ, ತಲಕಾಡು,  ಹಾಗೂ ಸಂಖ್ಯೆ 2 ರ ಕೊಠಡಿಯಲ್ಲಿ ಮೂಗೂರು, ಬೈರಾ ಪುರ ಹಾಗೂ ಗರ್ಗೇಶ್ವರಿ ಜಿ.ಪಂ ಕ್ಷೇತ್ರಗಳ ಮತ ಎಣಿಕೆ  ನಡೆಯಲಿದೆ.

ಸಂಖ್ಯೆ 3 ರ ಕೊಠಡಿಯಲ್ಲಿ ಕೊಡಗಳ್ಳಿ ತಾ.ಪಂ ಕ್ಷೇತ್ರದ ತುರಗನೂರು, ಮೆಣಸಿಕ್ಯಾತಹಳ್ಳಿ, ಬಿ.ಸೀಹಳ್ಳಿ, ಸಂಖ್ಯೆ 4 ರ ಕೊಠಡಿಯಲ್ಲಿ ಹೆಗ್ಗೂರು, ಅತ್ತಹಳ್ಳಿ, ಸೋಮನಾಥಪುರ, ಚಿದರವಳ್ಳಿ, ಸಂಖ್ಯೆ 5  ಕೊಠಡಿಯಲ್ಲಿ ಸೋಸಲೆ, ಹೊಳೆಸಾಲು, ಮುತ್ತಲವಾಡಿ, ದೊಡ್ಡಬಾಗಿಲು, ಸಂಖ್ಯೆ 6 ರ ಕೊಠಡಿಯಲ್ಲಿ ತಲಕಾಡು, ಟಿ.ಮೇಗಡಹಳ್ಳಿ, ಮಾದಾಪುರ, ಮಾಲಂಗಿ, ಕೊತ್ತೇಗಾಲ, ಸಂಖ್ಯೆ 7 ರಲ್ಲಿ ಮೂಗೂರು, ಹ್ಯಾಕನೂರು,  ಆಲಗೂಡು, ಬೈರಾಪುರ ಹಾಗೂ ಸಂಖ್ಯೆ 8 ರ ಕೊಠಡಿಯಲ್ಲಿ ಗರ್ಗೇಶ್ವರಿ, ತುಂಬಲ, ಕಿರಗಸೂರು ಹಾಗೂ  ರಂಗಸಮುದ್ರ ತಾ.ಪಂ ಕ್ಷೇತ್ರಗಳ ಮತ ಏಣಿಕೆ ಕಾರ್ಯ ನಡೆಯಲಿದೆ.  ತಹಶೀಲ್ದಾರ್ ವಿ.ಆರ್.ಶೈಲಜಾ, ಚುನಾವಣಾಧಿಕಾರಿಗಳಾದ ಪುರುಷೋತ್ತಮ್, ಎಚ್.ಎಂ. ಶಂಕರ್, ಸಂಪತ್  ದೊರೈರಾಜ್   ಸೇರಿದಂತೆ ಹಲವರು ಉಪ ಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.