ADVERTISEMENT

ದಲಿತರಿಗೆ ಬಿಜೆಪಿ ಏನು ಮಾಡಿದೆ: ಸಿದ್ದರಾಮಯ್ಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 9:39 IST
Last Updated 30 ಮಾರ್ಚ್ 2018, 9:39 IST

ಮೈಸೂರು: ‘ಬಿಜೆಪಿ ಹಾಗೂ ಅಮಿತ್‌ ಶಾ ಢೋಂಗಿತನ ಜನರಿಗೆ ಗೊತ್ತು. ಕೇಂದ್ರ ದಲ್ಲಿ ಅಧಿಕಾರದಲ್ಲಿರುವ ಈ ಪಕ್ಷದವರು ದಲಿತರಿಗೆ ಏನು ಮಾಡಿದ್ದಾರೆ? ದಲಿತರ ಮನೆಗೆ ಹೋಗಿ ಊಟ ಮಾಡುವುದು ರಾಜಕೀಯ ನಾಟಕ’ ಎಂದು ಸಿ.ಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

2006ರಲ್ಲಿ ಚಾಮುಂಡೇಶ್ವರಿ ಉಪಚುನಾವಣೆಯ ಗೆಲುವು ಅಕ್ರಮ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಅಂದು ಚುನಾವಣಾ ವೀಕ್ಷಕರಾಗಿದ್ದ ಪೀಟರ್‌ ಅವರು ಜೆಡಿಎಸ್‌–ಬಿಜೆಪಿ ಅಕ್ರಮಗಳನ್ನು ತಡೆದಿದ್ದರು. ಅವರು ಹೇಗೆ ನನ್ನನ್ನು ಗೆಲ್ಲಿಸುತ್ತಾರೆ. ಕುಮಾರಸ್ವಾಮಿಗೆ ಇದು ಗೊತ್ತಿಲ್ಲವೇ‌’ ಎಂದು ಕೇಳಿದರು.

‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲ ದಿನ ಭೇಟಿಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಹಳ್ಳಿಗಳಿಗಷ್ಟೇ ಭೇಟಿ ನೀಡಿದ್ದೇನೆ. ಮಾರ್ಚ್‌ 31ಕ್ಕೆ ಇಲವಾಲ ಹೋಬಳಿಯಲ್ಲಿ ಪ್ರಚಾರ ನಡೆಸುತ್ತೇನೆ’ ಎಂದರು.

ADVERTISEMENT

**

ಗೆಲುವು ನಮ್ಮದೇ: ಯತೀಂದ್ರ

‘ಬಿ.ಎಸ್‌.ಯಡಿಯೂರಪ್ಪ ಪುತ್ರ ವಿಜಯೇಂದ್ರ ಸೇರಿದಂತೆ ಯಾರೇ ಸ್ಪರ್ಧಿಸಿದರೂ ಗೆಲುವು ನಮ್ಮದೇ. ಎರಡೂ ಕ್ಷೇತ್ರಗಳಲ್ಲಿನ ಅಭಿವೃದ್ಧಿಯೇ ನಮಗೆ ಶ್ರೀರಕ್ಷೆ’ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುರುವಾರ ಸಿದ್ದರಾಮಯ್ಯ ಪ್ರಚಾರ ನಡೆಸುವಾಗ ಯತೀಂದ್ರ ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.