ADVERTISEMENT

ಧರ್ಮಗಳನ್ನು ಮುಕ್ತ ಮನಸ್ಸಿನಿಂದ ನೋಡಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2012, 5:25 IST
Last Updated 13 ನವೆಂಬರ್ 2012, 5:25 IST

ಮೈಸೂರು: `ಎಲ್ಲ ಧರ್ಮಗಳನ್ನು ಮುಕ್ತ ಮನಸ್ಸಿನಿಂದ ನೋಡಬೇಕು~ ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಹೇಳಿದರು.

ನಗರದ ರೋಟರಿ ಪಶ್ಚಿಮ ಸಭಾಂಗಣದಲ್ಲಿ ವಿಸ್ಮಯ ಚಿಂತನ ಮಿಲನ ಮತ್ತು ಮೈಸೂರು ಫೋರಂ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಿವೃತ್ತ ಪ್ರಾಧ್ಯಾಪಕ ಎಂ.ಉಮಾಪತಿ ಅವರ `ಒಸಾಮ ಬಿನ್ ಲಾಡೆನ್ ಭಯೋತ್ಪಾದನೆ ಮತ್ತು ಅಲ್‌ಖೈದಾ~ ಪುಸ್ತಕ ಲೋಕಾ ರ್ಪಣೆ ಮಾಡಿ ಮಾತನಾಡಿದರು.

`ಸ್ವಾಮಿ ವಿವೇಕಾನಂದರನ್ನು ಹಿಂದೂ ಧರ್ಮ ಏಜೆಂಟರಂತೆ ರಾಜಕಾರಣಿಗಳು ಬಿಂಬಿಸಿದ್ದರು. ಆದರೆ ವಿವೇಕಾನಂದರು ಒಂದೇ ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಕ್ರೈಸ್ತ, ಇಸ್ಲಾಂ ಎಲ್ಲ ಧರ್ಮಗಳನ್ನು ಮುಕ್ತ ಮನಸ್ಸಿ ನಿಂದ ನೋಡುತ್ತಿದ್ದರು. ಇದನ್ನು ಅವರೇ ಹೇಳಿಕೊಂಡಿದ್ದರು. ಭಾರತ ದಲ್ಲಿ ಹಿಂದೂ-ಮುಸಲ್ಮಾನ ಧರ್ಮ ಗಳ ಮಿಲನವಾಗಬೇಕೆಂದು ಸಹ ಹೇಳಿದ್ದರು. ಅದ್ಭುತ ಶಕ್ತಿ ಉಳ್ಳ ಧರ್ಮಗಳ ವ್ಯಾಮೋಹಕ್ಕೆ ಒಳಗಾಗಿ ಒಳಿತು ಮಾಡುವ ಜೊತೆಗೆ ಕೆಡಕು   ಸಹ ಮಾಡಲಾಗಿದೆ~ ಎಂದು ತಿಳಿಸಿದರು.

`ಲಾಡೆನ್ ಹತ್ಯೆ ವಿಚಾರವನ್ನು ಕುತೂಹಲಕಾರಿಯಾಗಿ ಬಣ್ಣಿಸಲಾ ಗಿದೆ. 20-30 ಪುಟಗಳನ್ನು ಕಡಿಮೆ ಮಾಡಿ ಪಠ್ಯವಾಗಿ ಮಾಡಿದರೆ ಮಕ್ಕಳಿಗೆ ಪುಸ್ತಕದ ಪರಿಚಯವಾಗು ತ್ತದೆ. ಆದರೆ ಈ ಸರ್ಕಾರದಲ್ಲಿ ಇದು ಸಾಧ್ಯ ವಿಲ್ಲ. ಮುಂದೆ ಈ ಬಗ್ಗೆ ಪರಿಶೀಲಿ ಸೋಣ~ ಎಂದರು.

ಪ್ರೊ.ಮುಜಾಫರ್ ಅಸ್ಸಾದಿ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಂಪಾದನ ವಿಭಾಗ ಮುಖ್ಯಸ್ಥ ಡಾ.ಕೃಷ್ಣೇಗೌಡ, ಮೈಸೂರು  ಫೋರಂನ ಪ್ರೊ.ಕೆ.ಸಿ.ಬೆಳ್ಳಿಯಪ್ಪ ಇದ್ದರು. ವಿಸ್ಮಯ ಚಿಂತನ ಮಿಲನ ಡಾ.ಹಾಲತಿ ಸೋಮಶೇಖರ್ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.