ನಂಜನಗೂಡು: ಇಲ್ಲಿನ ಪುರಸಭೆಯಲ್ಲಿ ಈಚೆಗೆ ನಡೆದ ಆಯ-ವ್ಯಯ ಮಂಡನೆ ಸಭೆಯಲ್ಲಿ ಅಧ್ಯಕ್ಷ ಬಿ.ಚೆಲುವರಾಜು ಅವರು 2012-13ನೇ ಸಾಲಿಗೆ 1.74 ಕೋಟಿ ರೂಪಾಯಿ ಉಳಿತಾಯ ಬಜೆಟ್ ಮಂಡಿಸಿದರು.
ಎಸ್‌ಎಫ್‌ಸಿ ಅನಿರ್ಬಂಧಿತ ಅನುದಾನದಿಂದ ರೂ.3 ಕೋಟಿ, ಇತರೆ ಉದ್ದೇಶದ ಅನುದಾನದಿಂದ ರೂ. 1.66 ಕೋಟಿ, ನೀರು ಮತ್ತು ಒಳಚರಂಡಿ ಶುಲ್ಕದಿಂದ ರೂ. 25 ಲಕ್ಷ, ಆಸ್ತಿ ತೆರಿಗೆಯಿಂದ ರೂ. 60 ಲಕ್ಷ ಸೇರಿದಂತೆ ಒಟ್ಟು ರೂ. 15.64 ಕೋಟಿ ಆದಾಯ ನಿರೀಕ್ಷಿಸಲಾಗಿದೆ.
ಕಟ್ಟಡ ನಿರ್ಮಾಣಕ್ಕೆ ರೂ. 1.20 ಕೋಟಿ, ಭಾರಿ ವಾಹನಗಳ ಖರೀದಿಗೆ ರೂ. 30 ಲಕ್ಷ, ಜೆಸಿಬಿ ಮತ್ತು ಒಳಚರಂಡಿ ಸ್ವಚ್ಛತೆಯ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರ ಖರೀದಿಗೆ ರೂ. 48 ಲಕ್ಷ, ಬೀದಿ ದೀಪಗಳ ಬಲ್ಬ್ ಖರೀದಿಗೆ 45 ಲಕ್ಷ, ಬೀದಿ ದೀಪಗಳ ದುರಸ್ತಿ, ನಿರ್ವಹಣೆಗೆ 2.30 ಲಕ್ಷ, ಶೇ 22.75ರ ಮೀಸಲು ಹಣ 71.48 ಲಕ್ಷ, ಶೇ 7.25 ರ ಮೀಸಲಿಗೆ 2.27 ಲಕ್ಷ ಸೇರಿ ರೂ. 13.90 ಕೋಟಿ ಖರ್ಚು ಮಾಡಲು ನಿರ್ಧರಿಸಲಾಗಿದೆ ಎಂದು ಚೆಲುವರಾಜು ಸಭೆಗೆ ತಿಳಿಸಿದರು.
ಮುಖ್ಯಾಧಿಕಾರಿ ಡಿ.ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಖಾಲೀದ್‌ಅಹಮದ್, ಸದಸ್ಯರಾದ ಕೆ.ಜಿ.ಆನಂದ್, ಸುಧಾ, ಅಲಮೇಲು, ರಾಜೇಶ್ವರಿ, ಶ್ರೀಕಂಠಜೋಯಿಸ್, ಸೈಯದ್ ನಾಸಿರ್, ಎನ್.ಆರ್.ದೊರೆಸ್ವಾಮಿ, ಚಂದ್ರಶೇಖರ್, ವಿಜಯಾಂಬಿಕಾ, ಸಿ.ಎಂ.ಶಂಕರ್, ಆರ್.ರಾಜು, ದೊಡ್ಡಮಾದಯ್ಯ, ಜಿ.ಮುಹೀರ್ ಅಹಮದ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.