ADVERTISEMENT

ನಿಲ್ಲದ ವಾಂತಿ- ಭೇದಿ: ರೋಗಿಗಳ ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 10:10 IST
Last Updated 7 ಏಪ್ರಿಲ್ 2012, 10:10 IST

ನಂಜನಗೂಡು: ಕಳೆದ ನಾಲ್ಕು ದಿನಗಳ ಹಿಂದೆ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕಾಣಿಸಿಕೊಂಡ ವಾಂತಿ, ಭೇದಿ (ಕರಳುಬೇನೆ) ಪ್ರಕರಣಗಳು ಶುಕ್ರವಾರವೂ ಮುಂದುವರೆದಿದ್ದು, ಈವರೆಗೆ 150ಕ್ಕೂ ಅಧಿಕ ರೋಗಿಗಳು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾದ್ದಾರೆ.

60ಕ್ಕೂ ಹೆಚ್ಚು ರೋಗಿಗಳು ಶುಕ್ರವಾರ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 100 ರೋಗಿಗಳು ಚಿಕಿತ್ಸೆ ಪಡೆದ ಬಳಿಕ ಬಿಡುಗಡೆಗೊಂಡಿದ್ದಾರೆ. ಅಲ್ಲದೇ ಗಂಭೀರ ಸ್ವರೂಪದ 26 ರೋಗಿಗಳನ್ನು ಮೈಸೂರು ಸಾಂಕ್ರಾಮಿಕ ರೋಗಿಗಳ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಕರಳುಬೇನೆಗೆ ನಿಖರ ಕಾರಣ ಏನೆಂಬುದು ಮೈಸೂರು ಪ್ರಯೋಗಾಲಯದ ವರದಿ ಬಂದ ನಂತರ ತಿಳಿಯಲಿದೆ.

ಮಂಗಳವಾರ ದೊಡ್ಡಜಾತ್ರೆ ಸಮಯದಲ್ಲಿ ವಿತರಿಸಿರಬಹುದಾದ ಅಶುದ್ಧ ನೀರು ಮಜ್ಜಿಗೆ, ಪಾನಕ ಸೇವನೆಯಿಂದ ವಾಂತಿ, ಭೇದಿ ಕಾಣಿಸಿಕೊಂಡಿದೆ ಎಂಬ ಶಂಕೆಯನ್ನು ತಾಲ್ಲೂಕು ಆರೋಗ್ಯಾಧಿಕಾರಿ ನಾಗೇಶ್ ವ್ಯಕ್ತಪಡಿಸಿದ್ದಾರೆ. ಬೇಸಿಗೆಯ ಈ ಹಂಗಾಮಿನಲ್ಲಿ ಸಾರ್ವಜನಿಕರು ಕುದಿಸಿ, ಆರಿಸಿ, ಶೋಧಿಸಿದ ನೀರು ಕುಡಿಯಬೇಕು. ರಸ್ತೆಬದಿ ಮಾರುವ ಹಣ್ಣುಗಳನ್ನು ತಿನ್ನಬಾರದು ಎಂದೂ ಆರೋಗ್ಯಾಧಿಕಾರಿ ಮನವಿ ಮಾಡಿದ್ದಾರೆ.

ಶಾಸಕರ ಭೇಟಿ: ನಿರಂತರವಾಗಿ ವಾತಿ, ಭೇದಿ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ವಿ.ಶ್ರೀನಿವಾಸಪ್ರಸಾದ್ ಶುಕ್ರವಾರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ವೈದ್ಯೆ ಪುಟ್ಟತಾಯಮ್ಮ ಅವರಿಂದ ಮಾಹಿತಿ ಪಡೆದರು. ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಾರುತಿ, ಪುರಸಭೆ ಉಪಾಧ್ಯಕ್ಷೆ ಎಂ.ಗಾಯತ್ರಿ, ಮಾಜಿ ಉಪಾಧ್ಯಕ್ಷ ಎನ್.ಇಂದ್ರ, ಬಿಸಿಸಿ ಅಧ್ಯಕ್ಷ ಸುಬ್ಬಣ್ಣ, ಮಹದೇವಪ್ಪ, ಕೆಪಿಸಿಸಿ ಸದಸ್ಯ ಎಚ್.ಪಿ. ಬಸವರಾಜು, ರಾಜಶೇಖರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.