ADVERTISEMENT

ಪ್ರಗತಿಪರ ಚಿಂತನೆಯಿಂದ ಕೀಳರಿಮೆ ನಾಶ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 8:40 IST
Last Updated 21 ಏಪ್ರಿಲ್ 2012, 8:40 IST

ಮೈಸೂರು: ನಾವು ಹಿಂದುಳಿದವರಾಗಿರಲು ಕಾರಣ ವಾದ ಕೊರತೆ, ನ್ಯೂನತೆಗಳನ್ನು ನಿವಾರಿಸಿಕೊಂಡು ಬೆಳೆಯಬೇಕು. ತೆಗಳಿಕೆ, ಟೀಕೆಗಳನ್ನು ಜಾತಿ ಕಾರಣ ವಾಗಿ ತೆಗೆದುಕೊಳ್ಳದೇ ಪ್ರಗತಿಪರವಾಗಿ ಚಿಂತನೆ ನಡೆಸಬೇಕು ಆಗ ಕೀಳರಿಮೆ ಇರುವುದಿಲ್ಲ ಎಂದು ರಾಜ್ಯ ಸಂಪನ್ಮೂಲ ಕೇಂದ್ರ ಎಸ್. ತುಕಾರಾಂ ಹೇಳಿದರು.

ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಶುಕ್ರವಾರ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ `ಸಾಮಾಜಿಕ ಸಮನ್ವಯತೆ ನೆಲ ಸಂಸ್ಕೃತಿಯ ಹುಡುಕಾಟ~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

`ಬುದ್ಧ, ಅಂಬೇಡ್ಕರ್, ಬಸವಣ್ಣ, ಮಹಾತ್ಮಾ ಗಾಂಧೀಜಿ, ಕುವೆಂಪು ಅಂತಹವರು ತಮ್ಮ ವ್ಯಕ್ತಿತ್ವ ವನ್ನು ತಾವೇ ರೂಪಿಸಿಕೊಂಡರು. ಅಪಾರ ಅಧ್ಯಯ ನದ ಬಲದಿಂದ ಎಲ್ಲ ಕೊರತೆಗಳನ್ನೂ ಮೀರಿ ನಿಂತರು. ಮಾನವತಾವಾದದ ಮೂಲಕ ಎಲ್ಲ ವರ್ಗದ ಶೋಷಿತ ರನ್ನೂ ಸಮಾನರನ್ನಾಗಿ ಕಂಡರು. ಅದರಿಂದಲೇ ಅವರು ಮಹಾನ್ ಮಾನವತಾವಾದಿ ಗಳಾಗಿ ಮಾದರಿಯಾದರು.

ಅವರಂತಹ ಮಹನೀಯರ ಕುರಿತು ಆಳವಾದ ಅಧ್ಯಯನವನ್ನು ಯುವಜನತೆ ಮಾಡಬೇಕು. ಬೇರೆಯವರ ಟೀಕೆಗಳನ್ನು ತಮ್ಮ ಜಾತಿಗೆ ಮಾಡಿದ ಅವಮಾನ ಎಂದು ಬಗೆದು ಪರರಿಂದ ಭಿನ್ನವಾಗಲು ಪ್ರಯತ್ನಿಸಿ ಕೀಳರಿಮೆ ಅನುಭವಿಸಬಾರದು~ ಎಂದು ಹೇಳಿದರು.

`ಸಂಸ್ಕೃತಿ ಹುಟ್ಟಿದ್ದೇ ತಾರತಮ್ಯವನ್ನು ಅಳಿಸಿ ಹಾಕಲು. ಆದರೆ ನೆಲದ ಸಂಸ್ಕೃತಿ ಬರುವುದು ನಾವು ಅನುಭವಿಸಿದ ನೋವು, ಕಷ್ಟಗಳು ಮತ್ತು ಸಾಧನೆ ಗಳಿಂದ. ಆದರೆ ಇವತ್ತು ನಮ್ಮ ನೆಲದ ಸಂಪತ್ತು ಸಾಗರದಾಚೆ ಹೋಗಿ ಸೇರುತ್ತಿದೆ, ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳ ಹಿಂದೆ ಹೋಗು ತ್ತಿದೆ.

ಮನಸ್ಸಿನಲ್ಲಿ ಎನ್‌ಆರ್‌ಐ (ಅನಿವಾಸಿ ಭಾರತೀಯ) ಆಗುವ ಕನಸು ಇಟ್ಟು ಕೊಂಡಿರುವ ಯುವಕ-ಯುವತಿಯರಿಗೆ ನೆಲಸಂಸ್ಕೃತಿಯ ಅನುಭವ ಎಲ್ಲಿದೆ~ ಎಂದು ವಿಷಾದ ವ್ಯಕ್ತಪಡಿಸಿದರು.`ದ್ವೇಷ, ಟೀಕೆಗಳಿಂದ ಸಮಾಜವನ್ನು ಬದಲಾಯಿ ಸಲು ಸಾಧ್ಯವಿಲ್ಲ. ನಮ್ಮನ್ನು ನಾವು ಬದಲಾಯಿಸಿಕೊ ಳ್ಳಬೇಕು.

ಅದಕ್ಕಿರುವ ಒಂದೇ ಮಾರ್ಗವೆಂದರೆ ಓದು. ವಿವೇಕಾನಂದ, ಅಂಬೇಡ್ಕರ್, ಗಾಂಧಿ, ಕನಕದಾಸ ರಂತಹವರೆಲ್ಲ ಹಿಡಿದಿದ್ದು ಜ್ಞಾನದ ಹಾದಿಯನ್ನೇ ಅಲ್ಲವೇ? ಅದರಿಂದಲೇ ಅವರು ಎಲ್ಲ ಬಗೆಯ ಅವ ಮಾನಿತರು, ಶೋಷಿತರ ಧ್ವನಿಯಾದರು~ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್. ಆರ್. ರಮೇಶ್ ವಹಿಸಿದ್ದರು. ಸೋಮಾನಿ ಕಾಲೇಜಿನ ಪ್ರಾಧ್ಯಾಪಕ ಡಾ. ಎಂ. ಮಹದೇವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ದರು. ರಂಗ ನಿರ್ದೇಶಕ ಎಚ್. ಜನಾರ್ಧನ (ಜೆನ್ನಿ) ಆಶಯ ಭಾಷಣ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.