ಎಚ್.ಡಿ.ಕೋಟೆ: ವೈಷಮ್ಯದ ಹಿನ್ನೆಲೆಯಲ್ಲಿ ಜಮೀನಲ್ಲಿ ಬೆಳೆಯಲಾಗಿದ್ದ ಅವರೆ ಫಸಲನ್ನು ದುಷ್ಕರ್ಮಿಗಳು ನಾಶಪಡಿಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ತಾಲ್ಲೂಕಿನ ಕರಿಗಳ ಗ್ರಾಮದಲ್ಲಿ ವಾಸವಾಗಿರುವ ತಾಯಮ್ಮ -ಪುಟ್ಟಸ್ವಾಮಿ ದಂಪತಿಗೆ ಸೇರಿದ ಜಮೀನಿನಲ್ಲಿ ಬೆಳೆಯಲಾಗಿದ್ದ ಹತ್ತಿ ಮತ್ತು ಅವರೆ ಗಿಡಗಳನ್ನು ನಾಶಪಡಿಸಲಾಗಿದೆ. ಇದರಿಂದ ಲಕ್ಷಾಂತರ ಆದಾಯ ಬರುವ ಬೆಳೆ ನಾಶವಾಗಿದೆ.
ಕಿಡಿಗೇಡಿಗಳು ಹದಿನೈದು ದಿನದ ಹಿಂದೆ ಕೊಟ್ಟಿಗೆ ಮತ್ತು ಮನೆಗೆ ಬೆಂಕಿ ಹಚ್ಚಿದ್ದಾರೆ. ಸಂಪೂರ್ಣವಾಗಿ ಕೊಟ್ಟಿಗೆ ಸುಟ್ಟು ಹೋಗಿದೆ. ಮನೆಗೂ ಬೆಂಕಿ ಹಚ್ಚಲಾಗಿದ್ದು, ಮನೆಯವರೆಲ್ಲ ಎಚ್ಚರಗೊಂಡು ಬೆಂಕಿ ಆರಿಸಿದ್ದಾರೆ. ಈ ಸಂಬಂಧ ಹಂಪಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಈ ಹಂತದಲ್ಲಿಯೇ ಜಮೀನಿನಲ್ಲಿ ಬೆಳೆದು ನಿಂತ ಹತ್ತಿ ಮತ್ತು ಅವರೆ ಗಿಡಗಳನ್ನು ಸಂಪೂರ್ಣವಾಗಿ ಕಿತ್ತು ಹಾಕಿದ್ದಾರೆ. `ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಪರಿಹಾರ ನೀಡಬೇಕು' ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.