ADVERTISEMENT

ಬಿಟಿ ನಿಷೇಧ-ಕೇಂದ್ರಕ್ಕೆ ನಿಯೋಗ: ಶ್ರೀನಿವಾಸ್ ಪ್ರಸಾದ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 9:05 IST
Last Updated 12 ಏಪ್ರಿಲ್ 2012, 9:05 IST

ಮೈಸೂರು: `ಜೈವಿಕ ತಂತ್ರಜ್ಞಾನ ಪ್ರಾಧಿಕಾರ ಮಸೂದೆಯ (ಬಿಆರ್‌ಎಐ) ಸಾಧಕ ಬಾಧಕಗಳ ಬಗ್ಗೆ ಚರ್ಚಿಸದೆ ಅದನ್ನು ಅಂಗೀಕರಿಸದಂತೆ ಕೇಂದ್ರದ ಮೇಲೆ ಒತ್ತಡ ತರಬೇಕಾಗಿದೆ~ ಎಂದು ಶಾಸಕ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.

ವಿಶ್ವ ಕುಲಾಂತರಿ ವಿರೋಧಿ ದಿನದ ಅಂಗವಾಗಿ ಪತ್ರಕರ್ತರ ಸಂಘದಲ್ಲಿ ಬುಧವಾರ `ಬಿಟಿ ಕಾಟನ್ ಅಂಡ್ ಬಿ ಹ್ಯಾಂಡ್~ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಕುರಿತು ತಾವು ಕೆಲವು ಸಂಸತ್ ಸದಸ್ಯರೊಂದಿಗೆ ನಿಯೋಗ ತೆರಳಿ ಕೇಂದ್ರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

`ಬಿಟಿ ಹತ್ತಿ ಬೆಳೆಯಿಂದ ಆಗುತ್ತಿರುವ ಅನಾಹುತ ಗಳ ಬಗ್ಗೆ ತಜ್ಞರು, ಪರಿಸರ ಪ್ರೇಮಿಗಳು ಸಾಕಷ್ಟು ಬಾರಿ ಸರ್ಕಾರದ ಗಮನ ಸೆಳೆದಿದ್ದಾರೆ. ಕುಲಾಂತರಿ ಬೀಜಗ ಳಿಗೆ ಮುಕ್ತ ಅವಕಾಶ ಮಾಡಿಕೊಡಲಿದೆ ಎಂದು ಹೇಳ ಲಾಗುತ್ತಿರುವ ಬಿಆರ್‌ಎಐ ಮಸೂದೆಯನ್ನು ಜಾರಿ ಮಾಡುವ ಪೂರ್ವದಲ್ಲಿ ಈ ಕುರಿತು ವ್ಯಾಪಕ ಚರ್ಚೆ ಆಗಬೇಕು. ರೈತರು ದೇಶದ ಬೆನ್ನೆಲುಬು ಎನ್ನುತ್ತಾರೆ. ಆದರೆ, ಆ ಬೆನ್ನೆಲುಬನ್ನೇ ಮುರಿಯುವ ಯತ್ನ ಮಾಡ ಲಾಗುತ್ತಿದೆ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

`ಅತಿವೃಷ್ಟಿ, ಅನಾವೃಷ್ಟಿಯಂತಹ ಪ್ರಾಕೃತಿಕ ವಿಕೋ ಪಗ ಳಿಗೆ ಮೊದಲು ಬಲಿಯಾಗುವುದೇ ರೈತ. ಉತ್ತರ ಕರ್ನಾಟಕದಲ್ಲಿ ಈ ಹಿಂದೆ ಆಗಿರುವ ಅತಿವೃಷ್ಟಿಯಿಂದ ಸಾವಿರಾರು ಎಕರೆ ಜಮೀನು ಕೃಷಿಗೆ ಯೋಗ್ಯವಾಗಿಲ್ಲ. ಈವರೆಗೂ ನೊಂದ ರೈತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ~ ಎಂದರು.

ಸೇಜ್ ಸಂವಾದ ಸಂಚಾಲಕ ಕ.ನಾ.ರಾಮಚಂದ್ರ ಮಾತನಾಡಿ, `ರೈತರ ಮೇಲೆ ಕುಲಾಂತರಿ ಬೀಜ ಪ್ರಯೋಗಗಳನ್ನು ಮಾಡುತ್ತ ಬಹುರಾಷ್ಟ್ರೀಯ ಕಂಪೆನಿ ಗಳು ಲಾಭ ಮಾಡಿಕೊಳ್ಳುತ್ತಿವೆ. ಐದು ವರ್ಷಗಳಿಂದ ಈಚೆಗೆ ಭಾರತದಲ್ಲಿ ಬಿಟಿ ಹತ್ತಿ ಪ್ರಮಾಣ ಶೇ.70 ದಾಟಿದೆ. ಆರಂಭದಲ್ಲಿ ಅಧಿಕವಾಗಿದ್ದ ಇಳುವರಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ವೆಚ್ಚ ಭರಿಸಲಾಗದೆ ರೈತ ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾನೆ~ ಎಂದು ಹೇಳಿದರು.

`ಜೈವಿಕ ತಂತ್ರಜ್ಞಾನ ಉದ್ಯಮವನ್ನು ಧಿಕ್ಕರಿಸಿದ ಇಂಡೋನೇಷಿಯಾ, ತನ್ನ ದೇಶದ ಸುಲುವೇಸಿ ಪ್ರಾಂತ್ಯ ದಲ್ಲಿ ಬೆಳೆದು ನಿಂತಿದ್ದ ಬಿಟಿ ಹತ್ತಿ ಗಿಡಗಳನ್ನು ಕಿತ್ತು ಅವಕ್ಕೆ ಬೆಂಕಿ ಹಚ್ಚಿ ಮಾನ್ಸಾಂಟೋ ಕಂಪೆನಿಯನ್ನು ಹೊರಗಟ್ಟಿತ್ತು. ಬಿಟಿ ಹತ್ತಿ ಬೆಳೆಯ ಅನುಮತಿಗಾಗಿ ಸ್ಥಳೀಯ ಅಧಿಕಾರಿಗಳಿಗೆ ಮಾನ್ಸಾಂಟೋ ಕಂಪೆನಿ ಲಂಚ ನೀಡಲು ಮುಂದಾಗಿತ್ತು. ಈ ಹಗರಣವನ್ನು ಬಯಲು ಮಾಡಿದ  ಅಮೆರಿಕದ ನ್ಯಾಯಾಂಗ ಇಲಾಖೆ ಮಾನ್ಸಾಂಟೋ ಕಂಪೆನಿಗೆ 1.5ಲಕ್ಷ ಡಾಲರ್ ದಂಡ ವಿಧಿಸಿತು~ ಎಂದರು.

ಪರಿಸರ ತಜ್ಞ ರವಿಕುಮಾರ್ ಮಾತನಾಡಿ, `ಬಿಟಿ ಹತ್ತಿಯಿಂದ ಕಾಂಡಕೊರಕ ಹುಳು ಹತೋಟಿಗೆ ಬಂದಿರ ಬಹುದು, ಆದರೆ ಭೂಮಿಯಲ್ಲಿನ ಇತರೆ ಕೀಟಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಈ ಮೊದ ಲಿಗಿಂತ ಅಧಿಕ ಪ್ರಮಾಣದಲ್ಲಿ ರೈತ ಕೀಟನಾಶಕ ಬಳಸುವಂತಾ ಗಿದೆ. ಇದರಿಂದಾಗಿ ಬಿಟಿ ಹತ್ತಿ ಗಿಡ, ಬೇರು ಇತ್ಯಾದಿ ಗಳೆಲ್ಲವೂ ವಿಷ ಪೂರಿತವಾಗಿದ್ದು, ಜಾನುವಾರಗಳ ಮೇಲೂ ದುಷ್ಪರಿಣಾಮ ಬೀರುತ್ತಿವೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.