
ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಮಂಗಾರು ಬಿರುಸುಗೊಂಡಿದ್ದು, ರೈತರು ಬಿರುಸಿನ ಕೃಷಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಗದ್ದೆಗಳನ್ನು ಉಳುಮೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಬಿಟ್ಟುಬಿಟ್ಟು ಮಳೆಯಾಗುತ್ತಿ ರುವುದರಿಂದ ಕಾಫಿ ಬೆಳೆಗಾರರು ಕಾಫಿ ಗಿಡಗಳಿಗೆ ರಸಗೊಬ್ಬರ ಪೂರೈಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕೂಲಿ ಕಾರ್ಮಿಕರ ಕೊರತೆಯಿಂದ ಬೇರೆಡೆಗಳಿಂದ ಕೂಲಿ ಕಾರ್ಮಿಕರನ್ನು ವಾಹನಗಳಲ್ಲಿ ಸಾಗಿಸುತ್ತಿರುವುದು ಸಾಮಾನ್ಯವಾಗಿದೆ.
ನಾಪೋಕ್ಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಹಾಗೂ ಖಾಸಗಿ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ಅವಶ್ಯಕ ರಸಗೊಬ್ಬರ ದಾಸ್ತಾನು ಇದೆ. ಈ ವರ್ಷ ರಸಗೊಬ್ಬರ ಕೊರತೆಯಾಗುವುದಿಲ್ಲ. ರೈತರಿಗೆ ವಿತರಿಸಲು ಅವಶ್ಯವಿರುವ ಗೊಬ್ಬರ ಸರಬರಾಜಾಗುತ್ತಿದೆ ಎಂಬುದು ಮಾರಾಟಗಾರರ ಅಭಿಪ್ರಾಯ.
ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿಯೂ ರೈತರಿಗೆ ಬೇಕಾದ ಇಂಟಾನ್ ಹಾಗೂ ತುಂಗಾ ಬತ್ತದ ಬೀಜಗಳು ಅವಶ್ಯವಿರುವಷ್ಟು ದಾಸ್ತಾನು ಇದೆ ಎಂದು ನಾಪೋಕ್ಲು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮೀರಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.