ADVERTISEMENT

ಮಹಾತ್ಮರ ಆದರ್ಶ ಪಾಲಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 6:53 IST
Last Updated 6 ಏಪ್ರಿಲ್ 2013, 6:53 IST

ಪಿರಿಯಾಪಟ್ಟಣ: ಮಹಾತ್ಮರ ಆದರ್ಶಗಳು ಮತ್ತು ಚಿಂತನೆಗಳನ್ನು ಮಾದರಿಯಾಗಿಟ್ಟುಕೊಂಡು ಯುವ ಪೀಳಿಗೆ ಹೆಜ್ಜೆ ಇಟ್ಟಾಗ ಮಾತ್ರ ದೇಶ ಪ್ರಗತಿಯತ್ತ  ಸಾಗುತ್ತದೆ ಎಂದು ತಹಶೀಲ್ದಾರ್ ಎಂ.ಕೆ.ಸವಿತಾ ತಿಳಿಸಿದರು.

ಪಟ್ಟಣ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಆಯೋಜಿಸಲಾಗಿದ್ದ ಡಾ.ಬಾಬುಜಗಜೀವನರಾಂ ಜಯಂತಿಯಲ್ಲಿ ಮಾತನಾಡಿದರು.

ದೇಶದಲ್ಲಿ ಹಸಿರುಕಾಂತ್ರಿಯ ಮೂಲಕ ಕೃಷಿಯಲ್ಲಿ ಮಹತ್ತರ ಪ್ರಗತಿಯನ್ನು ಸಾಧಿಸಲು ಕಾರಣರಾದ ಬಾಬುರ ಚಿಂತನೆಗಳು ಇಂದಿಗೂ ಪ್ರಸ್ತುತವಾದವು. ಮಹಾತ್ಮರ  ದಿನಾಚರಣೆಗಳನ್ನು ಆಚರಿಸದರಷ್ಟೆ ಸಾಲದು ಅವರ ಆದರ್ಶಗಳನ್ನು ಅನುಸರಿಸಿದಾಗ ಮಾತ್ರ ದಿನಾಚಾರಣೆಗಳಿಗೆ ಅರ್ಥಬರುತ್ತದೆ ಎಂದು ತಿಳಿಸಿದರು.

ಸಮಾಜಕಲ್ಯಾಣಾಧಿಕಾರಿ ಕೆ.ಟಿ.ನಾರಾಯಣ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ರಾಮಲಿಂಗೂ, ಆದಿಜಾಂಬವ ಸಂಘದ ಜಿಲ್ಲಾ ಉಪಾಧ್ಯಕ್ಷ ವಿಜಿಕುಮಾರ್ ಮಾತನಾಡಿದರು. ತಾ.ಪಂ.ಇಓ ಕಾಂತರಾಜು, ಸರ್ಕಲ್ ಇನ್ಸ್‌ಪೆಕ್ಟರ್ ಪಿ.ವಿ.ವೆಂಕಟೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಂಕಜರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.