ADVERTISEMENT

ಮಾಪನ ನಿಯಮ ಪಾಲನೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 3 ಮೇ 2011, 6:10 IST
Last Updated 3 ಮೇ 2011, 6:10 IST

ತಿ.ನರಸೀಪುರ: ಮಾಪನಕ್ಕೆ ಸಂಬಂಧಿ ಸಿದಂತೆ ಏಪ್ರಿಲ್ 2011ರಿಂದ ಜಾರಿಯಾಗಿರುವ ಲೀಗಲ್ ಮೆಟ್ರಾ ಲಜಿ ಕಾಯ್ದೆ 2009ರ ನಿಯಮ ಕಡ್ಡಾಯವಾಗಿ ಪಾಲನೆ ಮಾಡುವಂತೆ ಲೀಗಲ್ ಮೆಟ್ರಾಲಜಿಯ ಜಿಲ್ಲಾ ಸಹಾಯಕ ನಿಯಂತ್ರಕ ಇ.ಜಿ. ಪಾಟೀಲ್ ವರ್ತಕರಿಗೆ ಸೂಚನೆ ನೀಡಿದರು.

ಪಟ್ಟಣದ ವಾಸವಿ ಮಂದಿರದಲ್ಲಿ ಕಾನೂನು ಮಾಪನ ಇಲಾಖೆಯ ವರ್ತಕರ ಸಂಘದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಲೀಗಲ್ ಮೆಟ್ರಾಲಜಿ ಕಾಯ್ದೆ 2009ರ ಕಾನೂನು ಅರಿವು’ ಕಾರ್ಯಾಗಾರದಲ್ಲಿ ಮಾತನಾಡಿದರು.

ತೂಕ ಮತ್ತು ಅಳತೆಯ ಹಳೆ ಕಾಯಿದೆಯಲ್ಲಿನ ನಿಯಮ ಪರಿ ಷ್ಕರಿಸಲಾಗಿದ್ದು, ಹೊಸ ಕಾಯಿದೆ ಜಾರಿಗೊಳಿಸಲಾಗಿದೆ. ಈ ಕಾಯ್ದೆ ಅಡಿ ಪ್ರತಿ ವರ್ಷಕ್ಕೊಮ್ಮೆ ಕಾನೂನು ಮಾಪನದ ಪರಿಶೀಲನೆಗೆ ಬದಲಾಗಿ ಎರಡು ವರ್ಷಕ್ಕೊಮ್ಮೆ, ಕೈಗಾರಿಕಾ ಉದ್ಯಮಗಳಲ್ಲಿ ಬಳಸುವ ಅಳತೆ ಮಾಪಕಗಳನ್ನು 5 ವರ್ಷಕ್ಕೊಮ್ಮೆ, ಇಂಧನ ಅಳತೆ ಹಾಗೂ ವಿದ್ಯುನ್ಮಾನ ಅಳತೆ ಯಂತ್ರಗಳನ್ನು ಪ್ರತಿ ವರ್ಷಕ್ಕೊಮ್ಮೆ ಪರಿಶೀಲಿಸಿ ಮೊಹರು ಪಡೆಯುವಂತೆ ತಿಳಿಸಲಾಗಿದೆ.
 
ಅಳತೆಯಲ್ಲಿ ಲೋಪ-ದೋಷ ಕಂಡು ಬಂದಲ್ಲಿ ಈಗಿನ ಕಾಯಿದೆಯಡಿ ಶುಲ್ಕದಲ್ಲಿ ಹೆಚ್ಚಳ ಮಾಡಿ ಕನಿಷ್ಠ ದಂಡ ಶುಲ್ಕ ವಿಧಿಸಲಾಗುವುದು. ಈ ಹಿನ್ನೆಲೆಯಲ್ಲಿ ಕಾನೂನು ಮಾಪನದಲ್ಲಿ ಯಾವುದೇ ಲೋಪ ಬರದಂತೆ ಹಾಗೂ ಗ್ರಾಹಕರಿಗೆ ತೊಂದರೆಯಾಗದಂತೆ ಗಮನಹರಿಸಿ ವಹಿವಾಟು ನಡೆಸುವಂತೆ ಸೂಚಿಸಿದರು.

ಇನ್‌ಸ್ಪೆಕ್ಟರ್ ಆಫ್ ಲೀಗಲ್ ಮೆಟ್ರಲಾಜಿ ಮಹಾದೇವಸ್ವಾಮಿ ಮಾತನಾಡಿದರು. ವರ್ತಕರ ಸಂಘದ ಅಧ್ಯಕ್ಷ ಎಂ.ವಿ.ನಾಗರಾಜಶೆಟ್ಟಿ ಅಧ್ಯ ಕ್ಷತೆ ವಹಿಸಿದ್ದರು. ವರ್ತಕ ಎಂ.ಎನ್. ಪ್ರಕಾಶ್ ಸ್ವಾಗತಿಸಿ, ಎಂ.ಆರ್ .ಮುರುಳೀಧರ್ ವಂದಿಸಿದರು.

ವರ್ತಕರ ಸಂಘದ ಮುಖಂಡರಾದ ಎಂ.ಎನ್.ಅನಂತರಾಜಶೆಟ್ಟಿ, ಪಿ.ಎಂ. ಆನಂದರಾಜು, ಎಂ.ಎಸ್.ನಾಗೇಂದ್ರ ಬಾಬು, ಭವರ್‌ಲಾಲ್ ಕೊಠಾರಿ, ಜಿ.ಎನ್.ಕನಕರಾಜು, ಕೆ.ಅರ್. ಉದಯಕುಮಾರ್, ಜಿ.ವಿ.ದ್ವಾರಕ ನಾಥ್ ಸೇರಿದಂತೆ ಹಲವಾರು ವರ್ತಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.