ADVERTISEMENT

ಮೈಸೂರು ಮಾಗಿ ಉತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 5:03 IST
Last Updated 24 ಡಿಸೆಂಬರ್ 2017, 5:03 IST

ಮೈಸೂರು: ವರ್ಷಾಂತ್ಯದ ವೇಳೆಗೆ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರನ್ನು ರಂಜಿಸಲು ಆಯೋಜಿಸಿರುವ ‘ಮೈಸೂರು ಮಾಗಿ ಉತ್ಸವ’ಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಜನವರಿ 1ರವರೆಗೆ ನಡೆಯಲಿರುವ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಮಕ್ಕಳ ಹಬ್ಬ ಮತ್ತು ಓಪನ್ ಸ್ಟ್ರೀಟ್‌ ಫೆಸ್ಟಿವಲ್‌ ಏರ್ಪಡಿಸಲಾಗಿದೆ. ಅರಮನೆ ಆವರಣದಲ್ಲಿ ಪ್ರತಿದಿನ ಸಂಜೆ 7‌ರಿಂದ 9ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಡಿ.26ರಿಂದ 28ರ ವರೆಗೆ ಪಾರಂಪರಿಕ ಸೈಕಲ್‌ ಸವಾರಿ, ಡಿ.27ರಿಂದ 29ರ ವರೆಗೆ ಮಾಗಿ ಆಹಾರ ಮತ್ತು ಕೇಕ್‌ ಉತ್ಸವ ಆಯೋಜಿಸಲಾಗಿದೆ. ಮಾಗಿ ಉತ್ಸವವನ್ನು ದಸರಾ ಮಾದರಿಯಲ್ಲಿ ವಿನೂತನ ಬ್ರಾಂಡ್ ಆಗಿ ರೂಪಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ADVERTISEMENT

ಕ್ರಿಸ್‌ಮಸ್ ರಜೆ ಕಳೆಯಲು ಮತ್ತು ಹೊಸ ವರ್ಷ ಆಚರಣೆಗೆ ವಿದೇಶಿಯರು ಸೇರಿದಂತೆ ಮೈಸೂರಿಗೆ ಹೆಚ್ಚಿನ ಸಂಖ್ಯೆಯ ಜನರು ಭೇಟಿ ನೀಡುವರು. ಪ್ರವಾಸಿಗರಿಗೆ ಹೊಸ ಅನುಭವ ನೀಡುವ ಉದ್ದೇಶದಿಂದ ಈ ಹಬ್ಬ ಆಯೋಜಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.