ಮೈಸೂರು: ಎರಡು ತಿಂಗಳು ಹಿಂದೆ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಶ್ರೀಲಂಕಾದಿಂದ ತರಲಾಗಿದ್ದ ಐದು ಹಸಿರು ಅನಕೊಂಡ ಮರಿಗಳಲ್ಲಿ ಒಂದು ಶನಿವಾರ ಬೆಳಿಗ್ಗೆ ಮೃತಪಟ್ಟಿತು. ಇದು ಹೃದಯಾಘಾತದಿಂದ ಅಸುನೀಗಿದೆ ಎಂದು ಮೃಗಾಲಯದ ಪ್ರಕಟಣೆ ತಿಳಿಸಿದೆ.
2011ರ ನವೆಂಬರ್ 23ರಂದು ಶ್ರೀಲಂಕಾದ ರಾಷ್ಟ್ರೀಯ ಮೃಗಾಲಯವು ಈ ಹಸಿರು ಅನಕೊಂಡಗಳನ್ನು ಕಾಣಿಕೆಯಾಗಿ ನೀಡಿತ್ತು. ಈ ಐದರ ಪೈಕಿ ಗಾತ್ರದಲ್ಲಿ ಚಿಕ್ಕದಾಗಿದ್ದ ಅನಕೊಂಡವು ಈಗ ಮೃತಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.