ADVERTISEMENT

ವಿಭಾಗಮಟ್ಟದ ಖೋ ಖೋ: ಮೈಸೂರು ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 5:50 IST
Last Updated 12 ಅಕ್ಟೋಬರ್ 2012, 5:50 IST

ಮೈಸೂರು: ಆತಿಥೇಯ ಮೈಸೂರು ಜಿಲ್ಲಾ ಬಾಲಕ ಮತ್ತು ಬಾಲಕಿಯರ ತಂಡಗಳು ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಮುಕ್ತಾ ಯವಾದ ವಿಭಾಗಮಟ್ಟದ ಖೋ ಖೋ ಟೂರ್ನಿಯ 17 ವರ್ಷದೊಳಗಿನವರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಪೆವಿಲಿಯನ್ ಸ್ಪೋರ್ಟ್ಸ್ ಮೈದಾನದಲ್ಲಿ ನಡೆದ ಬಾಲಕರ ಫೈನಲ್ ಪಂದ್ಯದಲ್ಲಿ ಮೈಸೂರು ತಂಡವು 18-14ರಿಂದ ಮಂಡ್ಯ ಜಿಲ್ಲೆಯ ವಿರುದ್ಧ ಜಯ ಗಳಿಸಿತು.

ಮಂಡ್ಯ ಜಿಲ್ಲೆಯ ಹೇಮೂವನ್ ಪೀವರ್ ಉತ್ತಮ ಆಟಗಾರ, ಮೈಸೂರು ಜಿಲ್ಲೆಯ ಎಂ. ಸುಹಾಸ್ ಮತ್ತು ರಾಹುಲ್ ಕುಮಾರ್ ಕ್ರಮವಾಗಿ ಕ್ಯಾಚರ್ ಮತ್ತು ಆಲ್‌ರೌಂಡರ್ ಗೌರವಕ್ಕೆ ಪಾತ್ರರಾದರು.

ಬಾಲಕಿಯರ ವಿಭಾಗದಲ್ಲಿ ಮೈಸೂರು ಜಿಲ್ಲೆ ತಂಡವು 10-3ರಿಂದ ಮಂಡ್ಯ ತಂಡದ ವಿರುದ್ಧ ಗೆದ್ದಿತು. ಮೈಸೂರು ತಂಡದ ಮಂಜುಳಾ, ಮೇಘ ಮತ್ತು ಮಂಡ್ಯ ಜಿಲ್ಲೆಯ ಎ.ಪಿ. ಸೌಂದರ್ಯ ಕ್ರಮವಾಗಿ ಉತ್ತಮ ಓಟಗಾರ್ತಿ, ಉತ್ತಮ ಹಿಡಿತಗಾರ್ತಿ ಮತ್ತು ಸರ್ವಾಂಗೀಣ ಆಟಗಾರ್ತಿ ಗೌರವಕ್ಕೆ ಪಾತ್ರರಾದರು.

ಮಂಡ್ಯ ಬಾಲಕರ ಜಯಭೇರಿ
14 ವರ್ಷದ ಬಾಲಕರ ವಿಭಾಗದ ಪ್ರಶಸ್ತಿಯನ್ನು ಗುರುವಾರ ಮಂಡ್ಯ ಜಿಲ್ಲೆಯ ತಂಡವು ಗೆದ್ದು ಸಂಭ್ರಮಿಸಿತು. ಫೈನಲ್ ಪಂದ್ಯದಲ್ಲಿ ಮಂಡ್ಯ ತಂಡವು 16-14ರಿಂದ ಮೈಸೂರು ಜಿಲ್ಲಾ ತಂಡವನ್ನು ಸೋಲಿಸಿತು.

ಮಂಡ್ಯದ ಎಸ್.ಆರ್. ಧನಂಜಯ, ಎಸ್. ಸಂತೋಷ್ ಮತ್ತು ಮೈಸೂರಿನ ಎಚ್.ಎಂ. ಹರ್ಷ ಅವರು ಕ್ರಮವಾಗಿ ಉತ್ತಮ ಓಟಗಾರ, ಹಿಡಿತಗಾರ ಮತ್ತು ಸರ್ವಾಂಗೀಣ ಆಟಗಾರ ಗೌರವಕ್ಕೆ ಪಾತ್ರರಾದರು.
14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಮೈಸೂರು ಜಿಲ್ಲಾ ತಂಡವು 9-3ರಿಂದ ಮಂಡ್ಯ ತಂಡವನ್ನು ಸೋಲಿಸಿತು.

ಮೈಸೂರು ಜಿಲ್ಲೆಯ ಸಂಗೀತ, ಎಂ. ಸಹನ, ಚೈತ್ರ ಅವರು ಉತ್ತಮ ಓಟಗಾರ್ತಿ, ಹಿಡಿತಗಾರ್ತಿ ಮತ್ತು ಸರ್ವಾಂಗೀಣ ಆಟಗಾರ್ತಿ ಗೌರವ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.