ADVERTISEMENT

ಸಂಭ್ರಮದ ಗ್ರಾಮೀಣ ದಸರೆ: ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 7:05 IST
Last Updated 20 ಸೆಪ್ಟೆಂಬರ್ 2011, 7:05 IST

ಮೈಸೂರು: ತಾಲ್ಲೂಕಿನಲ್ಲಿ ನಡೆಯುವ ಗ್ರಾಮೀಣ ದಸರಾವನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಬೇಕು ಎಂದು ಶಾಸಕ ಎಂ.ಸತ್ಯನಾರಾಯಣ ಅಧಿಕಾರಿಗಳಿಗೆ ಕರೆ ನೀಡಿದರು.

ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಸೋಮವಾರ ನಡೆದ ಗ್ರಾಮೀಣ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಸೆ.26ರಂದು ಗ್ರಾಮೀಣ ದಸರಾ ನಡೆಯಲಿದ್ದು, ಬೆಳಿಗ್ಗೆ 9.30ಕ್ಕೆ ದಾರಿಪುರ ಗ್ರಾಮದಿಂದ ಕಲಾ ತಂಡಗಳು ಮೆರವಣಿಗೆ ಹೊರಡಲಿದೆ. ಜಯಪುರದ ರಾಘವೇಂದ್ರ ಪ್ರೌಢಶಾಲೆಯ ಆವರಣದಲ್ಲಿ ವೇದಿಕೆ ಕಾಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಉದ್ಘಾಟನೆ ಮಾಡಲಿದ್ದಾರೆ ಎಂದರು.

ವೇದಿಕೆಯ ಮುಂಭಾಗದಲ್ಲಿ ಗ್ರಾಮೀಣ ಸೊಗಡನ್ನು ಬಿಂಬಿಸುವಂತಹ ಪರಿಕರಗಳನ್ನು ಇಡಬೇಕು, ಎಲ್ಲಾ ಅಧಿಕಾರಿಗಳು ಅವರಿಗೆ ವಹಿಸಿರುವ ಕೆಲಸಗಳನ್ನು ಜವಾಬ್ದಾರಿಯುತವಾಗಿ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ತಹಶೀಲ್ದಾರ್ ಮಂಜುನಾಥಸ್ವಾಮಿ ಮಾತನಾಡಿ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿದ್ದು, ಶಿಕ್ಷಕರಿಂದ ಬೈಕ್ ರ‌್ಯಾಲಿ, 24ರಂದು ಕೆಸರುಗದ್ದೆ ಓಟ, ಗುಂಡು ಎತ್ತುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಕಬಡ್ಡಿ ಇತರೆ ಸ್ಪರ್ಧೆಗಳು ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಇಓ ಮಹಾಲಿಂಗಪ್ಪ, ಎಇಇ ಸುರೇಶ್‌ಬಾಬು, ಡಾ.ಸುಧಾ ದಾಶರಥಿ, ಸರ್ಕಲ್ ಇನ್ಸ್‌ಪೆಕ್ಟರ್ ಗೋಪಾಲಕೃಷ್ಣ ಇತರರು ಸಭೆಯಲ್ಲಿ ಹಾಜರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.