ADVERTISEMENT

ಸಭಾ ಭತ್ಯೆ ಹೆಚ್ಚಳಕ್ಕೆ ಗ್ರಾ.ಪಂ. ಸದಸ್ಯರ ಮನವಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2011, 9:50 IST
Last Updated 2 ಮಾರ್ಚ್ 2011, 9:50 IST

ಮೈಸೂರು: ಗ್ರಾಮ ಪಂಚಾಯ್ತಿ ಸದಸ್ಯರಿಗೂ ಸಭಾ ಭತ್ಯೆಯನ್ನು ಹೆಚ್ಚಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡುವ ುದಾಗಿ ಗ್ರಾಮ ಪಂಚಾಯಿತಿ ಚುನಾ ಯಿತ ಮಹಿಳಾ ಒಕ್ಕೂಟದ  ಅಧ್ಯಕ್ಷೆ ಭಾಗ್ಯಮ್ಮ ಎಚ್ಚರಿಸಿದ್ದಾರೆ.ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯ ರೊಂದಿಗೆ ಜಿಲ್ಲಾ ಪಂಚಾಯಿತಿ  ಸಿಇಓ ಜಿ.ಸತ್ಯವತಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿ ಅವರು ಮಾತ ನಾಡಿದರು.

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಸದಸ್ಯರಿಗೆ ಸಭಾಭತ್ಯೆ ಹೆಚ್ಚಿಸಲಾಗಿದೆ ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆದರೆ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಈ ತಾರತಮ್ಯ ಏಕೆ? ಲೋಕಸಭಾ ಹಾಗೂ ವಿಧಾನ ಸಭಾ ಸದಸ್ಯರಿಗೂ ಹೆಚ್ಚಿಸಿದ್ದು, ನಮಗೂ ಹೆಚ್ಚಿಸಿ ಎಂದು ಈ ಹಿಂದೆ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿ ಸಿದರು. ಇದಕ್ಕೆ ಉತ್ತರಿಸಿದ ಸಿಇಓ ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸು ವುದಾಗಿ ತಿಳಿಸಿದರು. ಹಿನಕಲ್ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಮುನಾರಾಣಿ, ಉಪಾಧ್ಯಕ್ಷೆ ಪಾರ್ವತಿ, ಇಲವಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಒಕ್ಕೂಟದ ಉಪಾಧ್ಯಕ್ಷೆ ವಿಜಯ ಲಕ್ಷ್ಮಿ, ಕಾರ್ಯದರ್ಶಿ ಬೆಳವಾಡಿ ಭಾಗ್ಯಲೋಕೇಶ್, ಸಂಯೋಜಕರಾದ ಸುಶೀಲ, ನೇತ್ರಾವತಿ, ಲತಾ, ಶಾರದ, ನಿರ್ಮಲ ಹಾಗೂ 50ಕ್ಕೂ ಹೆಚ್ಚು ಸದಸ್ಯರು ಹಾಜರಿದ್ದರು.

ಒತ್ತಾಯ: ಗ್ರಾಮ ಪಂಚಾಯ್ತಿ ಸದಸ್ಯರಿಗೆ ಗೌರವಧನ ಹೆಚ್ಚಿಸಬೇಕು ಎಂದು ಕೆ.ಆರ್.ನಗರ ತಾಲ್ಲೂಕು ಹೊಸ ಅಗ್ರಹಾರ ಗ್ರಾಮ ಪಂಚಾಯ್ತಿ ಸದಸ್ಯರಾದ ಎಚ್.ಆರ್.ಅರುಣ್ ಕುಮಾರ್ ಒತ್ತಾಯಿಸಿದ್ದಾರೆ.ಪ್ರಸ್ತುತ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಸಿಗುತ್ತಿರುವ 250 ರೂಪಾಯಿ ಗೌರವಧನ ಜಾಗತೀ ಕರಣ ಯುಗದಲ್ಲಿ ಸಾಲದು. ಸದಸ್ಯರು ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಕೊಡುತ್ತಾರೆ. ಕೇಂದ್ರ ಸರ್ಕಾರದಿಂದ ಬರುವ ಅನುದಾನಗಳು ಕಡಿಮೆಯಾಗಿದ್ದು, ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಸದಸ್ಯರಿಗೆ ಹೆಚ್ಚಿಸಿ ರುವಂತೆ ಮುಂದಿನ ಬಜೆಟ್‌ನಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಗೌರವಧನ ಹೆಚ್ಚಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಜನವಿರೋಧಿ ಬಜೆಟ್:ಪ್ರಸ್ತುತ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಜನವಿರೋಧಿ ಎಂದು ಅವರು ಟೀಕಿಸಿದ್ದಾರೆ. ಜನರು ಪ್ರತಿನಿತ್ಯ ನಾವು ಉಪಯೋಗಿಸುವ ಪೆಟ್ರೋಲ್, ಡೀಸೆಲ್, ಚಿನ್ನಾಭರಣ ಹಾಗೂ ಸಿಮೆಂಟ್ ಮುಂತಾದವುಗಳ ಬೆಲೆ ಹೆಚ್ಚಿಸಿದ್ದು, ಇದೊಂದು ಜನಸಾಮಾ ನ್ಯರ ಬಜೆಟ್ ಆಗಿಲ್ಲ ಎಂದು ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.