ADVERTISEMENT

ಸಾಧಕರಿಗೆ ಹೊಯ್ಸಳ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 6:35 IST
Last Updated 6 ಫೆಬ್ರುವರಿ 2012, 6:35 IST

ಮೈಸೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ 2011ನೇ ಸಾಲಿನ `ಹೊಯ್ಸಳ ಪ್ರಶಸ್ತಿ~ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹೊಯ್ಸಳ ಕನ್ನಡಸಂಘ, ಸವಿಗನ್ನಡ ಪತ್ರಿಕಾ ಬಳಗದ ವತಿಯಿಂದ ಕೃಷ್ಣಮೂರ್ತಿಪುರಂನ ರಾಮಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಿರಿಯ ವಕೀಲ ಸಂಪತ್ ಅಯ್ಯಂಗಾರ್, ವಿಜ್ಞಾನ ಲೇಖಕ ಎಚ್.ಜಿ.ಸುಬ್ಬರಾವ್, ಪ್ರೊ.ಎನ್.ವೆಂಕೋಬರಾವ್, ಇತಿಹಾಸ ತಜ್ಞ ಡಾ.ಎ.ವಿ.ನರಸಿಂಹಮೂರ್ತಿ, ಡಾ.ಎಚ್.ಕೆ. ರಾಮನಾಥ್, ಸಾಹಿತಿ ಡಾ.ಎಸ್.ಎನ್. ರಾಮಸ್ವಾಮಿ, ಪ್ರೊ.ಎಚ್.ಎಸ್.ಹರಿಶಂಕರ್,  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಎಂ.ಬಿ.ಜಯಶಂಕರ್, ಭೂದಾನಿ ನೆಲಮನೆ ಮರಿಸ್ವಾಮಿಗೌಡ, ಡಾ.ಟಿ.ಎನ್. ನಾಗರತ್ನ, ಡಾ.ತುಳಸಿ ರಾಮಚಂದ್ರ, ಡಾ.ವೈ.ಸಿ.ಭಾನುಮತಿ ಅವರು ಪ್ರಶಸ್ತಿ ಸ್ವೀಕರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ನಾಗಲಕ್ಷ್ಮಿ ಹರಿಹರೇಶ್ವರ ಮಾತನಾಡಿ, `ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ. ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ನಿರಂತರವಾಗಿ ಈ ಕೆಲಸವನ್ನು ಮಾಡಿಕೊಂಡು ಹೋಗಬೇಕು~ ಎಂದು  ಕೋರಿದರು.

ಮೇಲುಕೋಟೆಯ ಇಳೈ ಆಳ್ವಾರ್ ಸ್ವಾಮೀಜಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ, ಎಸ್.ರಾಘವೇಂದ್ರ ಭಟ್ಟ, ಸಿ.ಕೆ.ಎನ್.ರಾಜ, ಬ್ರಾಹ್ಮಣ ಮಹಾಸಭಾದ ಕೆ.ರಘುರಾಂ, ಜಿ.ಆರ್.ನಾಗರಾಜ್ ಉಪಸ್ಥಿತರಿದ್ದರು.      ವಿಮರ್ಶಕ ಪ್ರೊ.ಕೆ.ಬಿ.ಪ್ರಭುಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಹಿರಿಯ ಸಾಹಿತಿ ಎಲ್.ಬಸವರಾಜು ಮತ್ತು ಡಾ.ಜಗದೀಶ್ ಅವರ ನಿಧನಕ್ಕೆ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.