ADVERTISEMENT

ಸಂಜನಾಗೆ 128ನೇ ರ‍್ಯಾಂಕ್

ನೀಟ್‌: ಬೇಸ್‌ ಕಾಲೇಜು ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 7:34 IST
Last Updated 18 ಅಕ್ಟೋಬರ್ 2020, 7:34 IST
ಕೆ.ಸಂಜನಾ
ಕೆ.ಸಂಜನಾ   

ಮೈಸೂರು: ವೈದ್ಯಕೀಯ ಕೋರ್ಸ್‌ನ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ನಗರದ ಬೇಸ್‌ ಪಿಯು ಕಾಲೇಜಿನ ಕೆ.ಸಂಜನಾ ಅವರು ಅಖಿಲ ಭಾರತ ಮಟ್ಟದಲ್ಲಿ 128ನೇ ರ‍್ಯಾಂಕ್‌ ಪಡೆದುಕೊಂಡಿದ್ದಾರೆ.

ಒಟ್ಟು 720 ಅಂಕಗಳಲ್ಲಿ 696 ಅಂಕಗಳನ್ನು ಪಡೆದುಕೊಂಡಿರುವ ಅವರು ರಾಜ್ಯದಲ್ಲಿ ಮೈಸೂರು
ಭಾಗಕ್ಕೆ ‘ಟಾಪರ್‌’ ಎನಿಸಿಕೊಂಡಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆಯಲ್ಲಿ 591 ಅಂಕಗಳನ್ನು ಗಳಿಸಿದ್ದ
ಸಂಜನಾ, ಸಿಇಟಿಯಲ್ಲಿ ಬಿಎಸ್‌ಇ
ಕೃಷಿ ಮತ್ತು ಯೋಗ ವಿಜ್ಞಾನದಲ್ಲಿ ಎರಡನೇ ರ‍್ಯಾಂಕ್‌ ಪಡೆದು
ಕೊಂಡಿದ್ದರು.

ಇದೇ ಕಾಲೇಜಿನ ವಿದ್ಯಾರ್ಥಿಗಳಾದ ಶಶಾಂಕ್‌ ವಿ.ಸಿಂಹ ಅಖಿಲ ಭಾರತ ಮಟ್ಟದಲ್ಲಿ 1,005ನೇ ರ‍್ಯಾಂಕ್, ಮುಹಮ್ಮದ್‌ ಮುವಾಜ್ ಇಕ್ಬಾಲ್ 3,789 ರ‍್ಯಾಂಕ್ ಮತ್ತು ಸ್ವಾತಿ ಕೆ.
ಐತಾಳ್ ಅವರು 7,779 ರ‍್ಯಾಂಕ್‌ ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.