ADVERTISEMENT

14ನೇ ಬುಡಕಟ್ಟು ಯುವಜನ ವಿನಿಮಯ ಕಾರ್ಯಕ್ರಮ ಜ.18ರಿಂದ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 8:09 IST
Last Updated 8 ಜನವರಿ 2023, 8:09 IST
   

ಮೈಸೂರು: ಕೇಂದ್ರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ, ನೆಹರೂ ಯುವ ಕೇಂದ್ರ ಸಂಘಟನೆ ಹಾಗೂ ಗೃಹ ಮಂತ್ರಾಲಯದ ಸಹಯೋಗದಲ್ಲಿ 14ನೇ ಬುಡಕಟ್ಟು ಯುವಜನ ವಿನಿಮಯ ಕಾರ್ಯಕ್ರಮವನ್ನು ಜ.18ರಿಂದ ಜ.24ರವರೆಗೆ ಇಲ್ಲಿನ ಮಾನಸಗಂಗೋತ್ರಿಯ ಲಲಿತಕಲಾ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಮಹಾರಾಷ್ಟ್ರ, ಒಡಿಸ್ಸಾ, ತೆಲಂಗಾಣ, ಛತ್ತೀಸಗಡ, ಜಾರ್ಖಂಡ್, ಬಿಹಾರ ರಾಜ್ಯಗಳ ಆಯ್ದ ಬುಡಕಟ್ಟು ಯುವಜನರು (220) ಪಾಲ್ಗೊಳ್ಳಲಿದ್ದಾರೆ.

ಉದ್ಘಾಟನೆಯು ಜ.19ರಂದು ಬೆಳಿಗ್ಗೆ 11ಕ್ಕೆ ನಡೆಯಲಿದ್ದು, ರಾಜ್ಯಪಾಲ ಥಾವರಚಂದ್ ಗೆಹಲೋತ್ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭ 24ರಂದು ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಸಿ.ನಾರಾಯಣಗೌಡ ಭಾಗವಹಿಸಲಿದ್ದಾರೆ.

ADVERTISEMENT

‘ಬುಡಕಟ್ಟು ಯುವಜನರಿಗೆ ಬೇರೆ ಬೇರೆ ರಾಜ್ಯಗಳ ಸಂಸ್ಕೃತಿ, ಕಲೆ, ಆಹಾರ ಪದ್ಧತಿ, ಆಚಾರ–ವಿಚಾರ, ಭಾಷೆ ಕಲಿಕೆ, ಉಡುಗೆ–ತೊಡುಗೆ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಚಯಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಅವರನ್ನು ಜ.21ರಂದು ಚಾಮುಂಡಿಬೆಟ್ಟ, ಮೈಸೂರು ಅರಮನೆ, ಇನ್ಫೊಸಿಸ್ ಕ್ಯಾಂಪಸ್, ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ಗೆ ಕರೆದೊಯ್ಯಲಾಗುವುದು’ ಎಂದು ನೆಹರೂ ಯುವ ಕೇಂದ್ರ ಸಂಘಟನೆಯ ಕ್ಷೇತ್ರೀಯ ನಿರ್ದೇಶಕ ಎಂ.ಎನ್.ನಟರಾಜ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.