ADVERTISEMENT

15 ರಂದು ನಾಸ್ಕಾಮ್ ಮೈಸೂರು 2.0 ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 6:00 IST
Last Updated 11 ಅಕ್ಟೋಬರ್ 2011, 6:00 IST

ಮೈಸೂರು: ನಗರದ ಸೈಲೆಂಟ್ ಶೋರ್ ಹೋಟೆಲ್ ಮತ್ತು ರೆಸಾರ್ಟ್‌ನಲ್ಲಿ `ನಾಸ್ಕಾಮ್ ಮೈಸೂರು 2.0~ ಸಮ್ಮೇಳನ ಮತ್ತು ಪ್ರದರ್ಶನವು ಅಕ್ಟೋಬರ್ 15 ರಂದು ನಡೆಯಲಿದೆ.

ಅಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ರ ವರೆಗೆ ಉದ್ಯಮ ಪ್ರತಿನಿಧಿಗಳಿಗಾಗಿ ಸಮ್ಮೇಳನ ಮತ್ತು ಪ್ರದರ್ಶನವಿರುತ್ತದೆ. ಮಧ್ಯಾಹ್ನ 12.30 ರಿಂದ ಸಂಜೆ 6 ಗಂಟೆ ತನಕ ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶ ಇರುತ್ತದೆ. ನಾಸ್ಕಾಮ್ ಮೈಸೂರು 2.0 ಸಮ್ಮೇಳನ ಮತ್ತು ಪ್ರದರ್ಶನವು ನಗರದಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲ, ಕೌಶಲ, ಪ್ರತಿಭೆಯನ್ನು ದೇಶದ ಪ್ರಮುಖ ಐಟಿ ಉದ್ಯಮದ ಮುಂದೆ ತೆರೆದಿಡಲಾಗುತ್ತದೆ.

ಈ ಸಮ್ಮೇಳನ ಮತ್ತು ಪ್ರದರ್ಶನ ಐಟಿ ವಲಯದ ಪ್ರಮುಖ ಹೂಡಿಕೆ ದಾರರು, ಸಂಘಟಕರು, ಸರ್ಕಾರಿ ಅಧಿಕಾರಿಗಳು, ನೀತಿ ನಿರೂಪಕರುಗಳೂ ಒಂದೆಡೆ ಸೇರಿ ಐಟಿ ಉತ್ಪನ್ನಗಳು ಮತ್ತು ಸೇವೆಗಳು, ಬಿಪಿಓ, ಎಸ್‌ಇಝಡ್ ಮತ್ತು ಐಟಿ ಪಾರ್ಕ್‌ನ ಮೂಲ ಸೌಕರ್ಯಗಳ ಅಭಿವೃದ್ಧಿ, ಇನ್‌ಕ್ಯೂಟಿಷೆಯನ್ ಸೆಂಟರ್  ವಿಷಯಗಳ ಬಗ್ಗೆ ವಿನಿಯಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮಾಹಿತಿ ತಂತ್ರಜ್ಞಾನ ವಲಯಕ್ಕೆ ಸಂಬಂಧಿಸಿದ ಉತ್ಪನ್ನಗಳ ಅಭಿವೃದ್ಧಿ, ಇ-ವಾಣಿಜ್ಯ ಮತ್ತು ತರಬೇತಿಯ ಪ್ರಮುಖ ಕೇಂದ್ರವಾಗಿದೆ. ಈ ಕಾರಣಕ್ಕಾಗಿಯೇ ನಾಸ್ಕಾಮ್ ಸಮ್ಮೇಳನ ಮತ್ತು ಪ್ರದರ್ಶನ ಆಯೋಜಿಸಲಾಗುತ್ತಿದೆ.

ಸಮ್ಮೇಳನದಲ್ಲಿ ಇನ್‌ಫೋಸಿಸ್‌ನ ನಿವೃತ್ತ ಅಧ್ಯಕ್ಷ ಎನ್.ಆರ್.ನಾರಾಯಣಮೂರ್ತಿ ಭಾಷಣ ಮಾಡಲಿದ್ದು, ಇಂಟೆಲ್ ಅಧ್ಯಕ್ಷ ಡಾ.ಪ್ರವೀಣ್ ವೆಂಕಟಯ್ಯ, ಡಿಬಿಒಐ ಗ್ಲೋಬಲ್ ಸರ್ವೀಸ್‌ನ ವ್ಯವಸ್ಥಾಪಕ ನಿರ್ದೇಶಕ ಸಂಧ್ಯಾ ವಾಸುದೇವನ್, ಎಕ್ಸಲ್ ಸಾಫ್ಟ್ ಟೆಕ್ನಾಲಜಿಸ್‌ನ ವ್ಯವಸ್ಥಾಪಕ ನಿರ್ದೇಶಕ ಡಿ.ಸುಧನ್ವ, ಇವೆಂಟ್ಸು ಕ್ಯಾಪಿಟಲ್ ಪಾರ್ಟ್ನರ್ಸ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸಮಿರ್‌ಕುಮಾರ್, ಫಿಡಿಲಿಟ್ ಅಧ್ಯಕ್ಷ ಸುನಿಲ್ ಕುಂಟೆ, ಝಿನ್‌ನೊವ್ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್‌ನ ಕಾರ್ತಿಕ್ ಅನಂತ್, ಸೈಮ್ಯಾನ್ಟೆಕ್ ಕಾರ್ಪೋ ರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಗೊಯೆಲ್, ಪಿಕೆ4 ಸಾಫ್ಟ್‌ವೇರ್ ಟೆಕ್ನಾಲಜೀಸ್‌ನ ನರಸಿಂಹ ಮಂದ್ಯಮ್, ಉದ್ಯಮ ಮತ್ತು ತಂತ್ರಜ್ಞಾನಗಳ ಸಲಹೆಗಾರ ಎನ್‌ಆರ್‌ಕೆ ರಾಮನ್ ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.