ADVERTISEMENT

17 ಮಂದಿ ಪಕ್ಷ ಕಟ್ಟಿದವರಲ್ಲ: ಡಿವಿಎಸ್‌

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2020, 21:42 IST
Last Updated 13 ನವೆಂಬರ್ 2020, 21:42 IST
ಡಿ.ವಿ.ಸದಾನಂದಗೌಡ
ಡಿ.ವಿ.ಸದಾನಂದಗೌಡ   

ಮೈಸೂರು: ‘ಹೊರಗಿನಿಂದ ಬಿಜೆಪಿಗೆ ಬಂದ 17 ಮಂದಿ ಪಕ್ಷ ಕಟ್ಟಿದವರಲ್ಲ. ಪಕ್ಷ ಅಧಿಕಾರಕ್ಕೆ ಬರಲು ಅವರು ಸಹಕಾರ ನೀಡಿದ್ದಾರಷ್ಟೆ. ಅವರು ಬರುವ ಮುನ್ನ ನಮ್ಮಲ್ಲಿ 105 ಮಂದಿ ಶಾಸಕರು ಇದ್ದರು ಎಂಬುದನ್ನು ಕೂಡ ನೆನಪಿಸಿಕೊಳ್ಳಬೇಕು’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಶುಕ್ರವಾರ ಇಲ್ಲಿ ಹೇಳಿದರು.

ಸಂಪುಟ ವಿಸ್ತರಣೆ ವೇಳೆ ಎಲ್ಲ ಪಕ್ಷಾಂತರಿಗಳಿಗೆ ಸಚಿವ ಸ್ಥಾನ ಸಿಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಬೇರೆ ಪಕ್ಷದಿಂದ ಬಂದವರಿಗೆ ಕೊಡುವಂತಹದ್ದನ್ನು ಈಗಾಗಲೇ ಕೊಟ್ಟಿದ್ದೇವೆ. ಪಕ್ಷದಲ್ಲಿ ಈ ಹಿಂದಿನಿಂದ ಇದ್ದವರಿಗೂ ಕೊಡಬೇಕಲ್ವಾ’ ಎಂದು ಪ್ರಶ್ನಿಸಿದರು.

‘ಬಿಜೆಪಿಯಿಂದ 105 ಮಂದಿ ಗೆದ್ದಿದ್ದರು ಎಂಬದನ್ನು ಯಾರೂ ಲೆಕ್ಕ ಮಾಡುವುದಿಲ್ಲ. ಬಳಿಕ ಸೇರಿದ 17 ಮಂದಿಯೇ ಎಲ್ಲರಿಗೂ ದೊಡ್ಡದಾಗಿ ಕಾಣಿಸುತ್ತಾರೆ. ನಮ್ಮ ಎಲ್ಲ ಶಾಸಕರು ಕೂಡ ಮಂತ್ರಿಯಾಗುವ ಅರ್ಹತೆ ಹೊಂದಿದ್ಧಾರೆ. ಆದರೆ, ಯಾರಾಗಬೇಕು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.