ADVERTISEMENT

ಬಾಲಕಿ ಮೇಲೆ ದೌರ್ಜನ್ಯ ಎಸಗಿದನಿಗೆ 20 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 3:25 IST
Last Updated 20 ಏಪ್ರಿಲ್ 2021, 3:25 IST
ಸಿದ್ದರಾಮನಹುಂಡಿಯಲ್ಲಿ ಜೀರ್ಣೋದ್ಧಾರಗೊಂಡ ಕೋದಂಡರಾಮಮಂದಿರದಲ್ಲಿ ಸೋಮವಾರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು
ಸಿದ್ದರಾಮನಹುಂಡಿಯಲ್ಲಿ ಜೀರ್ಣೋದ್ಧಾರಗೊಂಡ ಕೋದಂಡರಾಮಮಂದಿರದಲ್ಲಿ ಸೋಮವಾರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು   

ಮೈಸೂರು: 9 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 28 ವರ್ಷದ ಆರೋಪಿಯೊಬ್ಬನಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯವು 20 ವರ್ಷ ಕಠಿಣ ಸಜೆ ಹಾಗೂ ₹50 ಸಾವಿರ ದಂಡ ವಿಧಿಸಿದೆ.

ಸಂಬಂಧದಲ್ಲಿ ಮಾವ ಆಗಬೇಕಿದ್ದ ಆರೋಪಿಯು ಆಟವಾಡುತ್ತಿದ್ದ ಬಾಲಕಿಯನ್ನು ಕಳೆದ ವರ್ಷ ಡಿಸೆಂಬರ್ 19ರಂದು ಚಾಕೋಲೆಟ್ ಕೊಡುವ ಆಮಿಷ ಒಡ್ಡಿ ಸ್ನಾನದ ಮನೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ, ರಕ್ತದ ಕಲೆಯಾಗಿದ್ದ ಬಾಲಕಿಯ ಒಳ ಉಡುಪನ್ನು ಸ್ನಾನದ ಮನೆಯ ಒಲೆಗೆ ಹಾಕಿ ಸುಟ್ಟು ಹಾಕಿದ್ದಲ್ಲದೇ ತನ್ನ ಬಟ್ಟೆಯನ್ನು ಒಗೆಯುವ ಮೂಲಕ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ್ದ.

ಬಾಲಕಿಯಿಂದ ವಿಚಾರ ತಿಳಿದ ಪೋಷಕರು ನೀಡಿದ ದೂರನ್ನು ದಾಖಲಿಸಿಕೊಂಡ ಪೊಲೀಸರು, ತ್ವರಿತವಾಗಿ ವಿಚಾರಣೆ ನಡೆಸಿ ಮಾರ್ಚ್ 6ರಂದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ADVERTISEMENT

ವಿಚಾರಣೆ ಕೈಗೆತ್ತಿಗೊಂಡ ಪೋಕ್ಸೊ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಬಿ.ಎಸ್.ಜಯಶ್ರೀ, ನಿರಂತರವಾಗಿ ವಿಚಾರಣೆ ನಡೆಸಿ 42 ದಿನಗಳಲ್ಲೇ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ.ಎಸ್.ಮಂಜುಳಾ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.