ADVERTISEMENT

ಮುಡುಕುತೊರೆ ಜಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 21 ಜನವರಿ 2018, 8:31 IST
Last Updated 21 ಜನವರಿ 2018, 8:31 IST

ತಲಕಾಡು: ಸಮೀಪದ ಮುಡುಕು ತೊರೆಯ ಐತಿಹಾಸ ಪ್ರಸಿದ್ಧ ಭ್ರಮರಾಂಬ ಸಮೇತ ಮಲ್ಲಿಕಾರ್ಜುನಸ್ವಾಮಿ ಜಾತ್ರಾ ಮಹೋತ್ಸವ ಶನಿವಾರ ಆರಂಭವಾಯಿತು. ಸಂಜೆ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತಲಕಾಡಿನಿಂದ ಮನೋನ್ಮಣಿ ಅಮ್ಮನವರ ಉತ್ಸವಮೂರ್ತಿ ಆಗಮನ ವಾಯಿತು. ಭಾನುವಾರ ಬೆಳಿಗ್ಗೆ ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ.

ಜಾತ್ರೆಗೆ ಒಂದು ದಿನ ಮೊದಲೇ ವಿವಿಧೆಡೆಯಿಂದ ರಾಸುಗಳು ಬಂದು ಸೇರಿದವು. ಎರಡು ದಿನದಲ್ಲಿಯೇ ನೂರಾರು ಜೋಡಿ ಹಸು, ಎತ್ತುಗಳು ಬಂದಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಮುಡುಕುತೊರೆಯಲ್ಲಿ ಪೊಲೀಸ್ ಉಪಠಾಣೆ ತೆರೆಯಲಾಗಿದೆ. ಅಲ್ಲದೆ, ಹೆಚ್ಚು ಜನರು ಓಡಾಡುವ ಪ್ರದೇಶಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ.

‘12 ಸ್ಥಳಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಆದರೆ, ಹೆಚ್ಚು ಜನರು ಬರುವ ನಿರೀಕ್ಷೆ ಇರುವುದರಿಂದ 20ರಿಂದ 22 ಪ್ರದೇಶದಲ್ಲಿ ಅಳವಡಿಸಲು ಆಲೋಚಿಸಲಾಗಿದೆ’ ಎಂದು ತಲಕಾಡು ಪೊಲೀಸ್ ಠಾಣೆ ಪಿಎಸ್ಐ ನಂದೀಶ್ ಕುಮಾರ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.