ADVERTISEMENT

ಸೌರಬೇಲಿಗೆ ಸಿಲುಕಿ 60 ವರ್ಷದ ಗಂಡಾನೆ ಸಾವು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 3:47 IST
Last Updated 3 ಸೆಪ್ಟೆಂಬರ್ 2021, 3:47 IST
ಹುಣಸೂರು ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ವಲಯದಲ್ಲಿ ತೂಗು ಸೌರಬೇಲಿಗೆ ಸಿಲುಕಿ ಗಂಡಾನೆ ಮೃತಪಟ್ಟಿದೆ
ಹುಣಸೂರು ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ವಲಯದಲ್ಲಿ ತೂಗು ಸೌರಬೇಲಿಗೆ ಸಿಲುಕಿ ಗಂಡಾನೆ ಮೃತಪಟ್ಟಿದೆ   

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ವಲಯದ ಅಗಸನಹುಂಡಿ ಶಾಖೆ ಬಿ.ಆರ್.ಕಟ್ಟೆ ಗಸ್ತಿನ ಹಾವಿನಗುಂಡಿ ಎಂಬಲ್ಲಿ 60 ವರ್ಷದ ಗಂಡಾನೆ ತೂಗು ಸೌರಬೇಲಿಗೆ ಸಿಲುಕಿ ಬುಧವಾರ ಮೃತಪಟ್ಟಿದೆ.

‘ಬುಧವಾರ ರಾತ್ರಿ ಆನೆ ಅರಣ್ಯ ದಾಟುವಾಗ, ಕಾಡಂಚಿನಲ್ಲಿ ಅರಣ್ಯ ಇಲಾಖೆ ಅಳವಡಿಸಿರುವ ತೂಗು ಸೌರಬೇಲಿಗೆ ಸಿಲುಕಿ ಮೃತಪಟ್ಟಿದೆ. ಆನೆಯ ದಂತವನ್ನು ಸಂರಕ್ಷಿಸಲಾಗಿದೆ. ಪಶು ವೈದ್ಯಾಧಿಕಾರಿ ಡಾ.ರಮೇಶ್ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಸಂಸ್ಕಾರ ಮಾಡಲಾಗಿದೆ’ ಎಂದು ನಾಗರಹೊಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್ ತಿಳಿಸಿದರು.

ಸ್ಥಳಕ್ಕೆ ಹುಲಿ ಯೋಜನಾ ನಿರ್ದೇಶಕ ಡಿ.ಮಹೇಶ್ ಕುಮಾರ್, ವಲಯ ಅರಣ್ಯಾಧಿಕಾರಿ ನಮನ ನಾರಾಯಣ್ ನಾಯಕ್ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.