ADVERTISEMENT

ಎಸ್‍ವಿಜಿ ವಿಶ್ವಪ್ರಜ್ಞ ಪಿಯು ಕಾಲೇಜಿಗೆ ಶೇ 96 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 16:18 IST
Last Updated 20 ಜುಲೈ 2020, 16:18 IST

ಮೈಸೂರು: ನಗರದ ದಟ್ಟಗಳ್ಳಿಯಲ್ಲಿರುವ ಎಸ್‍ವಿಜಿ ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿಯ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ 96ರಷ್ಟು ಫಲಿತಾಂಶ ಪಡೆದಿದೆ.

ವಾಣಿಜ್ಯ ವಿಭಾಗದಲ್ಲಿ ಕಾವ್ಯಾ ಬಿ. 587 ಅಂಕ (ಶೇ 98) ಪಡೆದು ರಾಜ್ಯಕ್ಕೆ ಒಂಬತ್ತನೇ ಹಾಗೂ ಮೈಸೂರು ಜಿಲ್ಲೆಗೆ ನಾಲ್ಕನೇ ಸ್ಥಾನ ಗಳಿಸಿದ್ದಾಳೆ. ಮೂರು ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾಳೆ.

ಸುಜೆನ್ ಮರಿಯಾ 576, ಸುಪ್ರಿಯಾ, ಪವನ್ ಸಿ.ಎ. 565, ಜ್ಞಾನೇಶ್ ಕುಮಾರ್ 563, ಪವನ್ ಜೆ. 556, ಗ್ರೀಷ್ಮಾ 543 ಅಂಕ ಗಳಿಸಿದ್ದಾರೆ.

ADVERTISEMENT

ವಿಜ್ಞಾನ ವಿಭಾಗದಲ್ಲಿ ಭರಣಿ ಸಂಜಯ್ 571, ದೀಕ್ಷಿತಾ ಸಿ. 569, ನಿಸರ್ಗ ಎಂ.ಜೆ. 559, ಧನುಷ್ ಎಂ.ಎ. 547, ಉಮಾ ಮಹೇಶ್ವರಿ 546, ಸಂಜನಾ ಶಾಖಾಪುರ್ 543, ಅನುಷಾ ಬಿ.ಎಂ. 538 ಅಂಕಗಳನ್ನು ಪಡೆದು ಉತ್ತಮ ಸಾಧನೆಗೈದಿದ್ದಾರೆ.

ಕಾಲೇಜಿನ 38 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 87 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ವ್ಯವಸ್ಥಾಪಕ ಟ್ರಸ್ಟಿ ವಿಶ್ವನಾಥ್ ಶೇಷಾಚಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.