ಮೈಸೂರು: ಲಕ್ಷಾಂತರ ಜನರ ಕಣ್ಮನ ಸೆಳೆದ ಜಂಬೂಸವಾರಿ ಮೆರವಣಿಗೆಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಸತತ 4ನೇ ಬಾರಿಗೆ ಯಶಸ್ವಿಯಾಗಿ ಹೊತ್ತ ‘ಅಭಿಮನ್ಯು’ ಆನೆ ಮೆಚ್ಚುಗೆಗೆ ಪಾತ್ರನಾದ.
ವಿವಿಧ ಶಿಬಿರಗಳಿಂದ 2 ತಂಡಗಳಲ್ಲಿ 14 ಆನೆಗಳನ್ನು ಅರಮನೆಗೆ ಕರೆತರಲಾಗಿತ್ತು. ಆದರೆ, 9 ಆನೆಗಳಿಗೆ ಮಾತ್ರ ಅವಕಾಶ ಸಿಕ್ಕಿತು. ‘ಅಭಿಮನ್ಯು’ ಜೊತೆಗೆ ‘ಕುಮ್ಕಿ’ ಆನೆಗಳಾಗಿ ‘ವರಲಕ್ಷ್ಮಿ’ ಹಾಗೂ ‘ವಿಜಯಾ’ ಹೆಜ್ಜೆ ಹಾಕಿದರೆ, ನಿಶಾನೆ ಆನೆಯಾಗಿ ‘ಅರ್ಜುನ’ ಸಾಗಿದ. ‘ನೌಫತ್’ ಆನೆಯಾಗಿ ‘ಭೀಮ’, ‘ಗೋಪಿ’, ಸಾಲಾನೆಗಳಾಗಿ ‘ಮಹೇಂದ್ರ’, ‘ಧನಂಜಯ’, ‘ಪ್ರಶಾಂತ್’ ಹೆಜ್ಜೆ ಹಾಕಿ ಗಮನಸೆಳದವು. ‘ರೋಹಿತ’, ‘ಹಿರಣ್ಯ’, ‘ಲಕ್ಷ್ಮಿ’, ‘ಕಂಜನ್’ ಹಾಗೂ ‘ಸುಗ್ರೀವ’ ಆನೆಗಳಿಗೆ ಅವಕಾಶ ದೊರೆಯಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.