ADVERTISEMENT

ಮೈಸೂರು | ’ಕಲಿಯುವ ಮನೆ’ ಮಕ್ಕಳ ಸಾಧನೆ

​ಪ್ರಜಾವಾಣಿ ವಾರ್ತೆ
Published 2 ಮೇ 2025, 16:04 IST
Last Updated 2 ಮೇ 2025, 16:04 IST
ಮೈಸೂರು ತಾಲ್ಲೂಕಿನ ಕೆಂಚಲಗೂಡಿನಲ್ಲಿರುವ ‘ಕಲಿಯುವ ಮನೆ’ ವಿಶೇಷ ಶಾಲೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಕಿಟ್ದೊರ್ಲಾಂಗ್ ಖೊಂಗ್ದುಪ್‌, ಸಿ.ಮುರುಳಿ, ಎಂ.ಪಿ.ರತನ್‌ ಕುಮಾರ್, ಡಿ.ರೋಹಿತ್, ಕೆ.ರುಶಿಲ್, ಗಿರೀಶ , ಸಿ.ತಿಲಕ್‌ ಗೌಡ, ಮಿಷೆಲ್‌, ವೈ.ಭಾರ್ಗವ್, ಅನಮಿಕ ಘೋಷ್‌, ದಿವ್ಯಲಕ್ಷ್ಮಿ, ಡಿ.ಬಿಂದುಶ್ರೀ 

ಮೈಸೂರು: ತಾಲ್ಲೂಕಿನ ಕೆಂಚಲಗೂಡಿನಲ್ಲಿರುವ ‘ಕಲಿಯುವ ಮನೆ’ಯಲ್ಲಿ ಶಾಲೆಗೆ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ದೊರೆತಿದೆ. 

ವಿವಿಧ ಸಮಸ್ಯೆಗಳಿಂದ ಬಾಧಿತರಾದ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣ ನೀಡುತ್ತಿರುವ ‘ಕಲಿಯುವ ಮನೆ’ ಪರ್ಯಾಯ ಶಾಲೆಯ ಎಲ್ಲ 12 ಮಂದಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಶಾಲೆಯಿಂದ ಹೊರಗುಳಿದ ಮಕ್ಕಳು, ಕಲಿಕೆಯಲ್ಲಿ ಹಿಂದುಳಿದವರು, ಒಡಕು ಕುಟುಂಬದ ಮಕ್ಕಳಿಗೆ ಶಿಕ್ಷಣವನ್ನು ಸಂಸ್ಥೆ ನೀಡುತ್ತಿದೆ. ಎಲ್ಲರೂ ಇಂಗ್ಲಿಷ್‌ ಮಾಧ್ಯಮದಲ್ಲಿಯೇ ಪರೀಕ್ಷೆ ಬರೆದು ಉತ್ತೀರ್ಣರಾಗಿರುವುದು ವಿಶೇಷ!

ADVERTISEMENT

ಕಿಟ್ದೊರ್ಲಾಂಗ್ ಖೊಂಗ್ದುಪ್‌ (ಶೇ 86.24), ಸಿ.ಮುರುಳಿ (ಶೇ 83.20), ಎಂ.ಪಿ.ರತನ್‌ ಕುಮಾರ್ (ಶೇ 82.40), ಡಿ.ರೋಹಿತ್ (ಶೇ 72.16), ಕೆ.ರುಶಿಲ್ (ಶೇ 71.360, ಗಿರೀಶ (ಶೇ 71.36), ದಿವ್ಯಲಕ್ಷ್ಮಿ (ಶೇ 66.08), ಸಿ.ತಿಲಕ್‌ ಗೌಡ (ಶೇ 63.52), ಅನಾಮಿಕ ಘೋಷ್‌ (ಶೇ 59.84), ಮಿಷೆಲ್‌ (ಶೇ 58.40), ವೈ.ಭಾರ್ಗವ್ (ಶೇ 57.76), ಡಿ.ಬಿಂದುಶ್ರೀ (ಶೇ 42.56) ಉತ್ತೀರ್ಣರಾಗಿದ್ದಾರೆ ಎಂದು ಶಾಲೆಯ ಸಂಸ್ಥಾಪಕ ಎಂ.ಆರ್.ಅನಂತಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.