ADVERTISEMENT

ಪೊಲೀಸ್‌ಗಿರಿ ಅಥವಾ ಗೂಂಡಾಗಿರಿ ಮಾಡ್ತಿದ್ದೀರಾ: ಎಚ್‌.ವಿಶ್ವನಾಥ್‌ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 19:30 IST
Last Updated 25 ಮಾರ್ಚ್ 2021, 19:30 IST
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್   

ಮೈಸೂರು: ‘ಬೈಕ್‌ ಸವಾರನನ್ನು ಸಾಯಿಸಿದ ಪೊಲೀಸರಿಗೆ ಪ್ರಶಂಸನಾ ಪತ್ರ ಕೊಡ್ತೀಯಾ? ನೀನು ಯಾವ ಸೀಮೆ ಪೊಲೀಸ್‌ ಕಮಿಷನರಯ್ಯ? ಥೂ, ನಿನ್ನ ಯೋಗ್ಯತೆಗಿಷ್ಟು ಬೆಂಕಿ ಹಾಕ... ಓಡಿಸಿಕೊಂಡು ಹೋಗಿ ಪ್ರಾಣ ತೆಗೆಯುತ್ತೀರಾ? ನೀವು ಪೊಲೀಸ್‌
ಗಿರಿ ಮಾಡ್ತಿದ್ದೀರಾ ಅಥವಾ ಗೂಂಡಾಗಿರಿ ಮಾಡ್ತಿದ್ದೀರಾ?’ ಎಂದು ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್‌ ಗುರುವಾರ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ರಿಂಗ್‌ ರಸ್ತೆಯ ಬಳಿಯಲ್ಲಿ ಇತ್ತೀಚೆಗೆ ಸಂಚಾರ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ, ವ್ಯಕ್ತಿಯೊಬ್ಬರು ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆಯನ್ನು ಪ್ರಸ್ತಾಪಿಸಿ, ಮೈಸೂರು ನಗರ ಪೊಲೀಸ್‌ ಕಮಿಷನರ್‌ ಡಾ.ಚಂದ್ರಗುಪ್ತ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಪೊಲೀಸ್‌ ಕಮಿಷನರ್ ಬೀದಿಗೆ ಬರಲ್ಲ, ಸಿಟಿ ರೌಂಡ್‌ ಹಾಕಲ್ಲ. ಎಷ್ಟು ವರ್ಷ ಆಯ್ತು ಮೈಸೂರಿಗೆ ಬಂದು? ಎಷ್ಟು ಜನ ಡಿಸಿಪಿ,‌ ಎಸಿಪಿಗಳಿದ್ದೀರಿ, ಏನು ಮಾಡುತ್ತಿದ್ದೀರಿ? ಜನಪ್ರತಿನಿಧಿಗಳು, ಜನರ‌ ಬಗ್ಗೆ ಇವರಿಗೆ ಗೌರವ ಇಲ್ಲ’ ಎಂದು ಹರಿಹಾಯ್ದರು.

ADVERTISEMENT

‘ಓಡಾಡಿಸಿಕೊಂಡು ಬೈಕ್ ಹಿಡಿಯಿರಿ ಅಂತ ಕಾನೂನು ಎಲ್ಲಿದೆ? ಸಿ.ಸಿ ಟಿ.ವಿ ಕ್ಯಾಮೆರಾ ಇಲ್ವಾ‌? ಸರ್ಕಾರದ ದುಡ್ಡಲ್ಲಿ ಕ್ಯಾಮೆರಾ ಹಾಗೂ ಇತರ ಉಪಕರಣಗಳನ್ನು ಕೊಟ್ಟಿದ್ದೀವಿ. ಅದರಲ್ಲಿ ಫೋಟೊ ತೆಗೆದು ದಂಡ ಹಾಕಿ. ಅದು ಬಿಟ್ಟು ಇಂತಹ ವರ್ತನೆಯನ್ನು ಯಾರೂ ಕ್ಷಮಿಸಲ್ಲ‌’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.