ಮೈಸೂರು: ‘ಕೃಷಿ ಸಾಲಮನ್ನಾದಿಂದ ಊರಿನ 10 ಜನರಿಗೆ ಲಾಭವಾದರೆ, ಗ್ಯಾರಂಟಿ ಯೋಜನೆ ಸೌಲಭ್ಯ 98 ಮನೆಗಳಿಗೆ ತಲುಪುತ್ತಿದೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಶುಕ್ರವಾರ ಇಲ್ಲಿ ಪ್ರತಿಪಾದಿಸಿದರು.
‘ರೈತ ದಸರಾ’ ಉದ್ಘಾಟಿಸಿದ ಅವರು, ‘ಹಾದಿ ತಪ್ಪಿಸುವವರ ಮಾತು ಕೇಳದೇ ತಾಳ್ಮೆಯಿಂದ ಆಲೋಚಿಸಬೇಕು. ರೈತರ ಅಭಿವೃದ್ಧಿಯೇ ಪಂಚ ಗ್ಯಾರಂಟಿಯ ಉದ್ದೇಶ’ ಎಂದರು.
‘ಎಲ್ಲ ಕೃಷಿ ಸಾಲಗಳು ಬೆಂಬಲ ಯೋಗ್ಯವಾಗಿರುತ್ತದೆಯೇ? ಹಿಂದಿನ ಸರ್ಕಾರಗಳು ಕೃಷಿಸಾಲ ಮನ್ನಾಕ್ಕೆ ₹5 ರಿಂದ ₹12 ಸಾವಿರ ಕೋಟಿ ವ್ಯಯಿಸಿರಬಹುದು. ನಾವು ಗ್ಯಾರಂಟಿ ಯೋಜನೆಗಳಿಗೆ 5 ವರ್ಷದಲ್ಲಿ ₹3 ಲಕ್ಷ ಕೋಟಿ ವ್ಯಯಿಸುತ್ತಿದ್ದೇವೆ’ ಎಂದು ಹೇಳಿದರು.
‘ಕೃಷಿ ಭಾಗ್ಯ ಯೋಜನೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಪೆನ್‌ಡ್ರೈವ್ ತೋರುವವರು, ಅಭಿವೃದ್ಧಿ ಮಾಡದೇ ಹಿಂದುತ್ವ ಹೆಸರಿನಲ್ಲಿ ವಿಭಜಿಸುವವರು ಬೇಕೆ? ಸದಾ ರೈತರ ಕುರಿತು ಆಲೋಚಿಸುವ ನಾವು ಬೇಕೆ? ತೀರ್ಮಾನ ನಿಮ್ಮದು’ ಎಂದರು.
‘ಇಡೀ ರಾಷ್ಟ್ರದಲ್ಲಿ ರಸಗೊಬ್ಬರದ ಕೊರತೆಗೆ ಕಾರಣವಾದ ಕೇಂದ್ರ ಸರ್ಕಾರವನ್ನು ಟೀಕಿಸದೆ, ರೈತರನ್ನು ರಾಜ್ಯ ಸರ್ಕಾರದ ವಿರುದ್ಧ ಎತ್ತಿಕಟ್ಟಲಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.