ADVERTISEMENT

ಅಲಯನ್ಸ್ ಕ್ಲಬ್ಸ್ ಸಂಪುಟ ಪದಗ್ರಹಣ 19ರಂದು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 14:09 IST
Last Updated 16 ಏಪ್ರಿಲ್ 2025, 14:09 IST

ಮೈಸೂರು: ‘ಅಸೊಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್‌ ಜಿಲ್ಲೆ 255 (ಎಸ್)ನ ಸಂಪುಟ ಪದಗ್ರಹಣ ಕಾರ್ಯಕ್ರಮ ‘ಸೇವಾ ಯೋಗ’ವು ಏ.19ರಂದು ಬೆಳಿಗ್ಗೆ 10ಕ್ಕೆ ಹೆಬ್ಬಾಳು ರಿಂಗ್ ರಸ್ತೆಯ ಹೋಟೆಲ್ ಕಲ್ಯಾಣಿಯಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಅಂತರರಾಷ್ಟ್ರೀಯ ನಿರ್ದೇಶಕ ನಾಗರಾಜ್ ವಿ.ಭೈರಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅಂತರರಾಷ್ಟ್ರೀಯ ಅಧ್ಯಕ್ಷ ರಾಜ್‌ಕುಮಾರ್ ಸಕ್ಸೇನಾ ಕಾರ್ಯಕ್ರಮ ಉದ್ಘಾಟಿಸುವರು. ಒಂದನೇ ಉಪಾಧ್ಯಕ್ಷ ಡಿ.ಬಿ.ಜಿ.ಶಾಸ್ತ್ರಿ ಹಾಜರಿರುವರು. ಕಾರ್ಯಕ್ರಮದ ಪ್ರಯುಕ್ತ ಸೇವಾ ಕಾರ್ಯ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ’ ಎಂದು ಮಾಹಿತಿ ನೀಡಿದರು.

ಪದಾಧಿಕಾರಿಗಳಾದ ಎಸ್.ವೆಂಕಟೇಶ್, ಬೆಟ್ಟೇಗೌಡ, ಕೃಷ್ಣೋಜಿ ರಾವ್, ಸಿ.ಬಿ.ಶ್ರೀಶೈಲ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.