ADVERTISEMENT

ಚಕ್ರಕ್ಕೆ ಸಿಲುಕಿದ ಹುರುಳಿಸೊಪ್ಪು; ಅರ್ಧಗಂಟೆ ನಿಂತ ಗರ್ಭಿಣಿ ಇದ್ದ ಆಂಬುಲೆನ್ಸ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 14:56 IST
Last Updated 19 ಜನವರಿ 2022, 14:56 IST
   

ಮೈಸೂರು: ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಗ್ರಾಮದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್‌ನ ಚಕ್ರಗಳಿಗೆ ರಸ್ತೆಯಲ್ಲಿ ಒಕ್ಕಣೆಗೆ ಹಾಕಿದ್ದ ಹುರುಳಿ ಸೊಪ್ಪು ಸಿಲುಕಿ ಅರ್ಧಗಂಟೆಗೂ ಹೆಚ್ಚು ಕಾಲ, ರಸ್ತೆಯಲ್ಲಿಯೇ ನಿಂತಿತು. ಇದರಿಂದ ಆಂಬುಲೆನ್ಸ್‌ನಲ್ಲಿದ್ದ ತರದೆಲೆ ಗ್ರಾಮದ ಗರ್ಭಿಣಿ ಪ್ರೇಮಾ ಹೆರಿಗೆ ನೋವಿನಿಂದ ಬಳಲಿದರು.

ಹುರುಳಿ ಸೊಪ್ಪು ಚಕ್ರಗಳಿಗೆ ಸಿಲುಕಿದ್ದರಿಂದ ವಾಹನ ಚಲಿಸಲಾಗದೇ ಚಾಲಕ ಸೊಪ್ಪನ್ನು ಬಿಡಿಸುವುದರಲ್ಲಿ ನಿರತರಾದರು. ಇವರ ಜತೆಗೆ ಸುತ್ತಮುತ್ತಲಿದ್ದ ರೈತರೂ ಸಹಕರಿಸಿದರು. ನಂತರ, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಕಳೆದ ವಾರವಷ್ಟೇ ತಾಲ್ಲೂಕಿನ ದೇವನೂರು– ಬದನವಾಳು ಮಾರ್ಗದಲ್ಲಿ ಹುರುಳಿಸೊಪ್ಪು ಸಿಲುಕಿ ಓಮ್ನಿ ಕಾರು ಭಸ್ಮಗೊಂಡಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.