ADVERTISEMENT

ಸೀತೆ ಮಂಟಿಯಲ್ಲಿ ಸೆರೆ ಸಿಕ್ಕ ಮತ್ತೊಂದು ಗಂಡು ಚಿರತೆ

​ಪ್ರಜಾವಾಣಿ ವಾರ್ತೆ
Published 12 ಮೇ 2025, 12:51 IST
Last Updated 12 ಮೇ 2025, 12:51 IST
ಬೆಟ್ಟದಪುರ ಹೊರಭಾಗದಲ್ಲಿರುವ ಸೀತೆ ಮಂಟಿಯಲ್ಲಿ ಸೋಮವಾರ ಬೆಳಗ್ಗೆ 9 ವರ್ಷದ ಗಂಡು ಚಿರತೆ ಸೆರೆಯಾಗಿರುವುದು.
ಬೆಟ್ಟದಪುರ ಹೊರಭಾಗದಲ್ಲಿರುವ ಸೀತೆ ಮಂಟಿಯಲ್ಲಿ ಸೋಮವಾರ ಬೆಳಗ್ಗೆ 9 ವರ್ಷದ ಗಂಡು ಚಿರತೆ ಸೆರೆಯಾಗಿರುವುದು.   

ಬೆಟ್ಟದಪುರ: ಗ್ರಾಮದ ಹೊರಭಾಗದಲ್ಲಿರುವ ಸೀತೆ ಮಂಟಿಯ ಬಳಿ ಸೋಮವಾರ ಬೆಳಿಗ್ಗೆ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ 9 ವರ್ಷ ವಯಸ್ಸಿನ ಗಂಡು ಚಿರತೆ ಸೆರೆಯಾಗಿದೆ.

20 ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಗಂಡು ಚಿರತೆಯೊಂದು ಸೆರೆಯಾಗಿತ್ತು. ಗ್ರಾಮದ ಮುಖಂಡ ನಿಶಾಂತ್ ಮಾತನಾಡಿ, ‘ಈ ಭಾಗದಲ್ಲಿ ಇನ್ನೂ ಮೂರು ಚಿರತೆಗಳು ಇವೆ. ಸೆರೆಸಿಕ್ಕ ಮರುದಿನವೇ ಮಂಟಿಯ ಬಳಿ ಕಾಣಿಸಿಕೊಂಡಿವೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಮತ್ತೊಮ್ಮೆ ಬೋನ್ ಇಡುವಂತೆ ಮನವಿ ಮಾಡಲಾಗಿತ್ತು’ ಎಂದರು.

‘ಮೂರು ದಿನಗಳ ಹಿಂದೆ ನನ್ನ ಒತ್ತಡಕ್ಕೆ ಮಣಿದು ಬೋನ್ ಇರಿಸಿದ್ದರು, ಬುಧವಾರ ಬೆಳಿಗ್ಗೆ ಚಿರತೆ ಸಿಕ್ಕಿದೆ,  ಇನ್ನೂ ಎರಡು ಬೋನ್ ಗಳ ವ್ಯವಸ್ಥೆ ಮಾಡಬೇಕಿದೆ, ಅಧಿಕಾರಿಗಳು ಗಮನ ಹರಿಸಿ ಉಳಿದ ಚಿರತೆಗಳನ್ನು ಸೆರೆ ಹಿಡಿಯಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ಸೆರೆ ಸಿಕ್ಕ ಗಂಡು ಚಿರತೆಯ ಆರೋಗ್ಯ ತಪಾಸಣೆ ನಡೆಸಿ ನಾಗರಹೊಳೆ ಸಂರಕ್ಷಣಾ ಕೇಂದ್ರಕ್ಕೆ ಬಿಡಲಾಯಿತು.  ಪಿರಿಯಾಪಟ್ಟಣ ಸಮೀಪದಲ್ಲಿ ಎರಡು ಬೋನ್ ಇರಿಸಲಾಗಿದೆ,  ಚಿರತೆಯ ಚಲನವಲನ ಗಮನಿಸಿ ಉಳಿದ ಚಿರತೆಗಳನ್ನು ಸೆರೆಹಿಡಿಯಲು ಕ್ರಮ ವಹಿಸಲಾಗುವುದು’ ಎಂದು ಆರ್‌ಎಫ್ಒ ಪದ್ಮಶ್ರೀ  ಮಾಹಿತಿ ನೀಡಿದ್ದಾರೆ.

ಬೆಟ್ಟದಪುರ ಹೊರಭಾಗದಲ್ಲಿರುವ ಸೀತೆ ಮಂಟಿಯಲ್ಲಿ ಸೋಮವಾರ ಬೆಳಗ್ಗೆ 9 ವರ್ಷದ ಗಂಡು ಚಿರತೆ ಸೆರೆಯಾಗಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.