ADVERTISEMENT

ಕೋವಿಡ್‌ನಿಂದ ತೊಂದರೆಗೊಳಗಾದವರಿಗೆ ನೆರವು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 11:50 IST
Last Updated 4 ನವೆಂಬರ್ 2020, 11:50 IST

ಮೈಸೂರು: ಕೋವಿಡ್‌ನಿಂದ ಆರ್ಥಿಕ ತೊಂದರೆಗೆ ಒಳಗಾದ 350 ಮಂದಿ ಬಡವರಿಗೆ ಫಿನೊಲೆಕ್ಸ್ ಪೈಪ್ಸ್ ಸಂಸ್ಥೆ ವತಿಯಿಂದ ಆಹಾರ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುವ ‘ಗೀವ್ ವಿತ್ ಡಿಗ್ನಿಟಿ’ ಕಾರ್ಯಕ್ರಮವು ಇಲ್ಲಿನ ಜೆ.ಪಿ.ನಗರದ ಪುಟ್ಟರಾಜ ಗವಾಯಿ ಮೈದಾನದಲ್ಲಿ ನ. 6ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿದೆ.

ಜೆ.ಪಿ.ನಗರದ ರೋಟರಿ ಕ್ಲಬ್ ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಕಾರ್ಮಿಕರ ಸಂಘದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಫಿನೊಲೆಕ್ಸ್ ಪೈಪ್ಸ್‌ನ ಎಸ್.ಮಹಂತೇಶ್ ಕುಮಾರ್ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೋಟರಿ ಸಂಸ್ಥೆಯವರು 300 ಹಾಗೂ ಸರ್‌.ಎಂ.ವಿಶ್ವೇಶ್ವರಯ್ಯ ಕಾರ್ಮಿಕರ ಸಂಘದವರು 350ಕ್ಕೂ ಅಧಿಕ ಬಡವರನ್ನು ಈಗಾಗಲೇ ಗುರುತಿಸಿದ್ದಾರೆ. ಇವರಿಗೆ ಮಾತ್ರವಷ್ಟೇ ದಿನಸಿ ಪದಾರ್ಥಗಳನ್ನು ವಿತರಿಸಲಾಗುತ್ತದೆ. ನೋಂದಣಿ ಇಲ್ಲದೇ ಅಂದು ಬಂದವರಿಗೆ ವಿತರಣೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ADVERTISEMENT

ಈಗಾಗಲೇ ಗುರುತಿಸಲಾಗಿರುವವರನ್ನು ಒಮ್ಮೆಗೆ 10 ಮಂದಿಯಂತೆ ಕರೆಸಿ ದಿನಸಿ ನೀಡಲಾಗುವುದು. ಗುಂಪುಗೂಡುವುದನ್ನು ಇದರಿಂದ ತಪ್ಪಿಸಬಹುದು. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು ಎಂದರು.

4 ಕೆ.ಜಿ.ಅಕ್ಕಿ, 3 ಕೆ.ಜಿ.ಗೋಧಿ ಹಿಟ್ಟು, 1 ಕೆ.ಜಿ.ತೊಗರಿ ಬೇಳೆ, 1 ಕೆ.ಜಿ.ಹೆಸರು ಕಾಳು, ರವೆ, ಚಹಾ ಪುಡಿ, ಕಡಲೆ ಹಿಟ್ಟು, ಸಕ್ಕರೆ, ಅವಲಕ್ಕಿ, ಸಾಂಬಾರ್ ಪುಡಿ, ಅಡುಗೆ ಎಣ್ಣೆ, ಸ್ಯಾನಿಟರಿ ನ್ಯಾಪ್‌ಕಿನ್ಸ್, ಮಾಸ್ಕ್, ಕೊಬ್ಬರಿ ಎಣ್ಣೆ, ಹ್ಯಾಂಡ್ ಸ್ಯಾನಿಟೈಜರ್, ಮ್ಯಾಗಿ ನ್ಯೂಡಲ್ಸ್ ಹಾಗೂ ಅಗತ್ಯ ಸಾಮಗ್ರಿಗಳು ಕಿಟ್‌ನಲ್ಲಿ ಇರಲಿವೆ.

ರೋಟರಿ ಕ್ಲಬ್ ಜೆ.ಪಿ.ನಗರ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್, ಸರ್.ಎಂ.ವಿಶ್ವೇಶ್ವರಯ್ಯ ಕಾರ್ಮಿಕರ ಸಂಘದ ಅಧ್ಯಕ್ಷ ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.